Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಮಲ್ಪೆ ಬೀಚ್ ಉತ್ಸವ : ವಿವಿಧ ಕಾರ್ಯಕ್ರಮಗಳು

Udupifirst-udupinews-


ಉಡುಪಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಉಡುಪಿ ವತಿಯಿಂದ ಜನವರಿ 20 ರಿಂದ 22 ರ ವರೆಗೆ, ಉಡುಪಿ ರಜತ ಉತ್ಸವದ ಪ್ರಯುಕ್ತ ನಡೆಯುವ ಮಲ್ಪೆ ಬೀಚ್ ಉತ್ಸವ ಕಾರ್ಯಕ್ರಮದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

 ಜ. 20 ರಿಂದ 21 ರ ವರೆಗೆ ಗಾಳಿಪಟ ಉತ್ಸವ, ಆರ್ಟ್ ಕ್ಯಾಂಪ್, ಫೋಟೋ ಎಕ್ಸಿಬಿಷನ್, ಫುಡ್ ಫೆಸ್ಟಿವಲ್ ನಡೆಯಲಿದ್ದು, ಜ. 21 ಮತ್ತು 22 ರಂದು ಈಜು ಸ್ಪರ್ಧೆ, ಪುರುಷರ ಕಬಡ್ಡಿ ಸ್ಪರ್ಧೆಗಳು ನಡೆಯಲಿವೆ.

ಜ. 22 ರಂದು ಶ್ವಾನ ಪ್ರದರ್ಶನ, ಚಿತ್ರಕಲಾ ಸ್ಪರ್ಧೆ, ಥ್ರೋಬಾಲ್ (ಮಹಿಳೆಯರಿಗೆ) ಸ್ಪರ್ಧೆಗಳು ನಡೆಯಲಿವೆ. 

ಪ್ರತಿದಿನ ಸಂಜೆ 6 ಗಂಟೆಗೆ ಸಂಗೀತ ರಸಸಂಜೆ ನಡೆಯಲಿದ್ದು, ಜನವರಿ 20 ರಂದು ರಾಜೇಶ್ ಕೃಷ್ಣನ್ ಹಾಗೂ ಚಂದನ್ ಶೆಟ್ಟಿ, 21 ರಂದು ಕುನಾಲ್ ಗಾಂಜಾವಾಲಾ ಮತ್ತು 22 ರಂದು ರಘು ದೀಕ್ಷಿತ್ ಅವರಿಂದ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.















0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo