Slider

ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಕ್ಯೂ.ಆರ್ ಕೋಡ್ ನಲ್ಲಿ ಲಭ್ಯ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Udupifirst-udupinews-


 ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಬಗೆಗಿನ ಮಾಹಿತಿಯನ್ನು ಇನ್ನು ಮುಂದೆ ಕ್ಯೂ.ಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.

  ಅವರು ಇಂದು ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಕರಾವಳಿ ವಿಕಿಮೀಡಿಯಾ ಮತ್ತು ವಿಕಿ ಇ-ಲರ್ನಿಂಗ್ ಕೋರ್ಸ್ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದೊಂದಿಗೆ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಇಲಾಖೆಯ ಕ್ಯೂ ಆರ್ ಕೋಡ್ ಬೋರ್ಡ್ ಅಳವಡಿಸುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಜ್ಜರಕಾಡು ಭುಜಂಗ ಪಾಕ್ ್ನ ಕುರಿತು ಕ್ಯೂ.ಆರ್ ಕೋಡ್ ಅನಾವರಣಗೊಳಿಸಿ ಮಾತನಾಡಿದರು.

ಜಿಲ್ಲೆಯ ಆಗಮಿಸುವ ಪ್ರವಾಸಿಗರು ಹಲವು ಪ್ರೇಕ್ಷಣಿಯ ಸ್ಥಳಗಳಿಗೆ ತೆರಳಿದರೂ ಸಹ ಅಲ್ಲಿನ ವೈಶಿಷ್ಟ್ಯತೆಯ ಸಂಪೂರ್ಣ ವಿವರಗಳು ಅವರಿಗೆ ದೊರೆಯದ ಕಾರಣ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ, ಪ್ರಸ್ತುತ ಜಿಲ್ಲೆಯ 30 ಪ್ರೇಕ್ಷಣೀಯ ಸ್ಥಳಗಳಿಗೆ ಕ್ಯೂ ಆರ್ ಕೋಡ್ ಮೂಲಕ ಅಲ್ಲಿನ ಪ್ರದೇಶದ ಇತಿಹಾಸ ಸೇರಿದಂತೆ ಸಂಪೂರ್ಣ ವಿವರಗಳನ್ನು ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿ ವೀಕ್ಷಿಸಲು ಸಾಧ್ಯವಾಗಲಿದ್ದು, ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದರು.

  ಜಿಲ್ಲೆಯಲ್ಲಿರುವ ಎಲ್ಲಾ ಪ್ರವಾಸಿತಾಣಗಳ ಕುರಿತಂತೆ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ ಇದೇ ರೀತಿಯಲ್ಲಿ ಕ್ಯೂ ಆರ್ ಕೋಡ್ ಗಳನ್ನು ಆ ಪ್ರದೇಶದಲ್ಲಿ ಅಳವಡಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಪ್ರವಾಸಿ ತಾಣಗಳ ಇತಿಹಾಸ ಮತ್ತು ಮಾಹಿತಿಗಳನ್ನು ಅಳವಡಿಸುವಾಗ, ನಿಖರ ಮತ್ತು ಅಧಿಕೃತ ಮಾಹಿತಿಗಳನ್ನು ಸಂಗ್ರಹಿಸಿ, ಪರಿಶೀಲಿಸುವಂತೆ ತಿಳಿಸಿದರು.

ಕಾಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಕಾರ್ಕಳ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ (ಪ್ರಭಾರ)ನಿರ್ದೇಶಕ ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo