Slider


ಹೃದಯಾಘಾತ 6ನೇ ತರಗತಿ ವಿದ್ಯಾರ್ಥಿ ಸಾವು

Udupifirst-udupinews-


ಕೊಡಗು ; ಹೃದಯಾಘಾತದಿಂದ 6ನೇ ತರಗತಿ ವಿದ್ಯಾರ್ಥಿಯೋರ್ವ ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಮೃತಪಟ್ಟಿರುವ ಘಟನೆ ಕೊಡಗಿನಲ್ಲಿ ನಡೆದಿದೆ.

ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮದಲ್ಲಿ ನಡೆದಿದ್ದು, ಕೀರ್ತನ್ (12) ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ. ಕೂಡುಮಂಗಳೂರು ಗ್ರಾಮದ ಚಾಲಕ ಮಂಜಾಚಾರಿ ಅವರ ಪುತ್ರ ಕೀರ್ತನ್ ಮೃತಪಟ್ಟಿರುವುದು ಎಲ್ಲರನ್ನೂ ದಂಗು ಬಡಿಸಿದೆ.

ಕೀರ್ತನ್ ಕುಶಾಲನಗರ ಸಮೀಪದ ಕೊಪ್ಪಭಾರತ ಮಾತಾ ಶಾಲಾ ವಿದ್ಯಾರ್ಥಿಯಾಗಿದ್ದ. ಕೀರ್ತನ್‌ ಓದುತ್ತಿದ್ದ ಅದೇ ಶಾಲೆಯಲ್ಲೇ ಬಸ್ ಚಾಲಕನಾಗಿ ತಂದೆ ಮಂಜಾಚಾರಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಶನಿವಾರ ತಡರಾತ್ರಿ ಕೀರ್ತನ್ ಮಲಗಿದ್ದ ಜಾಗದಿಂದಲೇ ಎರಡು ಬಾರಿ ಎದೆ ನೋವು ಎಂದು ಕಿರುಚಿಕೊಂಡಿದ್ದ. ಇದರಿಂದಾಗಿ ಗಾಬರಿಗೊಂಡ ಆತನ ಪೋಷಕರು ತಕ್ಷಣವೇ ಕುಶಾಲನಗರ ಆಸ್ಪತ್ರೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆ ಕೀರ್ತನ್‌ ಆ ವೇಳೆಗೆ ಮೃತಪಟ್ಟಿದ್ದನು. ಸಣ್ಣ ಮಕ್ಕಳಲ್ಲಿ ಹೃದಯಾಘಾತ ಸಂಭವಿಸಿರುವುದು ಬಾರೀ ಆತಂಕ ಉಂಟು ಮಾಡಿದೆ.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo