ಕಾರ್ಕಳ: ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯ ಮಾಳ ಎಸ್.ಕೆ ಬಾರ್ಡರ್‌ನ ಓಟೆಹಳ್ಳಿ ಬಳಿ ಎಂಬಲ್ಲಿ ಆ.3ರಂದು ಸಂಭಸಿದ ರಸ್ತೆ ಅಪಘಾತದಲ್ಲಿ ಕ್ರೂಸರ್‌ನಲ್ಲಿ ಪ್ರಯಾಣಿಸುತಿದ್ದ 9 ಮಂದಿ ಗಾಯಗೊಂಡಿದ್ದಾರೆ.
ಶೃಂಗೇರಿಯಿಂದ ಮಾಳ ಕಡೆಗೆ ಬರುತ್ತಿದ್ದ ಕ್ರೂಸರ್ ಹಾಗೂ ಮಾಳ ಕಡೆಯಿಂದ ಶೃಂಗೇರಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ನಡುವೆ ಮುಖಾಮುಖೀಯಾಗಿ ಢಿಕ್ಕಿ ನಡೆದಿದೆ.
ಘಟನೆಯಲ್ಲಿ ಕ್ರೂಸರ್ ಚಾಲಕ ಶ್ರೀಕಾಂತ್ ಹಾಗೂ ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮಹಿಳೆಯರು, ಮೂವರು ಮಕ್ಕಳು ಹಾಗೂ ಇಬ್ಬರು ಪುರುಷರಿಗೆ ಗಾಯಗಳಾಗಿವೆ. ಅಪಘಾತದ ತೀವ್ರತೆಗೆ ಎರಡು ವಾಹನಗಳು ಜಖಂಗೊಂಡಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ