ಎಂಜಿಎಂ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ, ಸಾಲಿಗ್ರಾಮದ ಚಿತ್ರಪಾಡಿಯ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧಿಕಾರ ಸ್ವೀಕರಿಸಿದ್ದಾರೆ.ಇದುವರೆಗೆ ಪ್ರಾಂಶುಪಾಲ ರಾಗಿದ್ದ ಡಾ.ದೇವಿದಾಸ ನಾಯ್ಕ್ ಸೇವಾ ನಿವೃತ್ತರಾಗಿದ್ದಾರೆ.
1992ರಲ್ಲಿ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಯನ್ನು ಪ್ರಾರಂಭಿಸಿದ ಕಾರಂತ, ೧೯೯೮ರಲ್ಲಿ ಎಂಜಿಎಂಗೆ ವರ್ಗಾವಣೆಗೊಂಡು ಕಳೆದ ೨೪ ವರ್ಷದಿಂದ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಕಾಲೇಜಿನ ಎನ್ನೆಸ್ಸೆಸ್, ರೆಡ್‌ಕ್ರಾಸ್ ಅಧಿಕಾರಿಯಾಗಿ, ಕಾಲೇಜಿನ ಸ್ಟಾಫ್ ಕ್ಲಬ್ಬಿನ ಸಂಚಾಲಕರಾಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ