ಕರಾವಳಿ ಕಡಲ ತೀರದಲ್ಲಿ ಪ್ರತಿ ಗಂಟೆಗೆ 45ರಿಂದ 55 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದ್ದು ಮೀನುಗಾರರು ಕಡಲಿಗಿಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಆ. 5ರಂದು ರಾತ್ರಿ 11.30ರ ತನಕ ಕಡಲ ತೀರದಲ್ಲಿ 3ರಿಂದ 3.8ಮೀ. ಎತ್ತರದ ಅಲೆಗಳು ಮಂಗಳೂರಿನಿಂದ ಕಾರವಾರ ತನಕದ ಕಡಲ ತೀರಕ್ಕೆ ಅಪ್ಪಳಿಸಲಿವೆ.
ಆ. 5, 7 ರಂದು ಉಡುಪಿ ಸಹಿತ ಕರಾವಳಿಯ ಅಲ್ಲಲ್ಲಿ ಗಾಳಿ, ಗುಡುಗಿನೊಂದಿಗೆ 115.6ರಿಂದ 204.4 ಮಿ.ಮೀ. ಮಳೆ ಬೀಳಲಿದೆ. ಆ.6ರಂದು 204.5 ಮಿ.ಮೀ. ಮಳೆಯಾಗಲಿದೆ. ಆ, 8, 9ರಂದು 64.5ರಿಂದ 115.5 ಮಿ.ಮೀ. ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ