ಬೆಂಗಳೂರು : ಹೆತ್ತಮ್ಮನೇ ಬುದ್ಧಿಮಾಂದ್ಯ ಮಗುವನ್ನು ಸಾಯಿಸಿದ್ದು, 4ನೇ ಮಹಡಿಯಿಂದ ಕೆಳಗೆ ಬಿದ್ದು 5 ವರ್ಷದ ಮಗು ಸಾವನ್ನಪ್ಪಿತ್ತು. ಈ ಹಿನ್ನೆಲೆ ಬುದ್ಧಿಮಾಂದ್ಯ ಮಗು ಕೊಂದ ತಾಯಿ ಕುಸುಮಾಳನ್ನು S.R ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ತಾಯಿ ಕುಸುಮಾ ಬುದ್ಧಿಮಾಂದ್ಯ ಮಗುವನ್ನ 4 ನೇ ಮಹಡಿಯಿಂದ ಎಸೆದು ಸಾಯಿಸಿದ್ದಳು. ಮೇಲಿಂದ ಬಿದ್ದ 5 ವರ್ಷದ ಮಗು ಸಾವನ್ನಪ್ಪಿತ್ತು. ಮಗು ಸಾಯಿಸೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗುವನ್ನು ಕೆಳಗೆಸೆದ ಬಳಿಕ ತಾಯಿ ಕುಸುಮಾ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಳು. ಅಕ್ಕಪಕ್ಕದ ಮನೆಯವರು ಆಕೆಯನ್ನು ರಕ್ಷಿಸಿದ್ದರು.
3 ತಿಂಗಳ ಹಿಂದೆ ಈಕೆ ಮಗುವನ್ನು ರೈಲ್ವೇ ಸ್ಟೇಷನ್ನಲ್ಲಿ ಬಿಟ್ಟು ಬಂದಿದ್ದಳು. ತಂದೆ ಮಗುವನ್ನು ಹುಡುಕಿ ಮನೆಗೆ ಕರೆತಂದಿದ್ದರು. ದಂತ ವೈದ್ಯಯಾಗಿ ಪ್ರಾಕ್ಟೀಸ್ ಮಾಡ್ತಿದ್ದ ಮಹಿಳೆ ಮಗುವನ್ನು ಕೊಂದಿದ್ದಾಳೆ. ಸಂಪಂಗಿರಾಮನಗರದ ಅದ್ವಿತ್ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆದಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ