ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಹಂತಕರ ಸುಳಿವು ಸಿಕ್ಕಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಅವರನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಕೃತ್ಯ ಎಸಗಿದವರು ಯಾರು ಎಂಬ ಸುಳಿವು ಸಿಕ್ಕಿದೆ. ಇನ್ನು 2-3 ದಿನದಲ್ಲಿ ಅವರು ಪತ್ತೆಯಾಗಲಿದ್ದಾರೆ ಎಂದಿದ್ದಾರೆ.
ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಕೆಲವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ವಿಚಾರಣೆಯಲ್ಲಿ ಕೃತ್ಯ ಯಾರು ಮಾಡಿದ್ದಾರೆಂಬುದು ಈಗಾಗಲೇ ಗೊತ್ತಾಗಿದೆ. ಈಗ ಬಂಧನಕ್ಕೊಳಗಾಗಿರುವ ಇಬ್ಬರು ಕೃತ್ಯ ಎಸಗಿದವರಲ್ಲ, ಕೃತ್ಯದ ಹಿಂದೆ ಇದ್ದವರು. ಯಾವುದೇ ಅಮಾಯಕರನ್ನು ಅನಾವಶ್ಯಕವಾಗಿ ಬಂಧಿಸುವುದಿಲ್ಲ ಎಂದು ಅವರು ಹೇಳಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ