ಕಾಪು ಪ್ರಖಂಡ ಭಜರಂಗದಳ ಸಂಚಾಲಕ ಸುಧೀರ್ ಸೋನು ಅಲಿಯಾಸ್ ನಾಮ ಸುಧೀರ್ ಅವರಿಗೆ ಜೀವ ಬೆದರಿಕೆ ಒಡ್ಡಿದ ಆರೋಪಿಗಳಿಗೆ ಉಡುಪಿ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಕಾಪು ಚಂದ್ರನಗರದ ನಿವಾಸಿಗಳಾದ ಅಶ್ರಫ್ ಯಾನೆ ಆಸಿ ಮತ್ತು ಸೋಯೆಬ್ ಮತ್ತವರ ತಂಡ ತನ್ನ ಮನೆಗೆ ನುಗ್ಗಿ ಜೀವ ಬೆದರಿಕೆ ಒಡ್ಡಿದ್ದರು ಎಂದು ಸುಧೀರ್ ಸೋನು ಶಿರ್ವ ಠಾಣೆಗೆ ದೂರು ನೀಡಿದ್ದರು.
ಅಲ್ಲದೆ ಅಶ್ರಫ್ ಈ ಹಿಂದೆ ಹಲವಾರು ಪ್ರಕಣಗಳಲ್ಲಿ ಭಾಗಿಯಾಗಿರುವುದರಿಂದ ಆತನನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಪೋಲಿಸರಿಗೆ ಮನವಿ ಮಾಡಿದ್ದರು.
ಆರೋಪಿಗಳಾದ ಅಶ್ರಫ್ ಮತ್ತು ಸೋಯೆಬ್‌ನನ್ನು ಬಂಧಿಸಿದ ಶಿರ್ವ ಪೋಲಿಸರು ಸೋಮವಾರ ಸಂಜೆ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇಂದು ಉಡುಪಿ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ