Slider

ಸ್ಫೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀ 3-8-2022



ರಾಜ್ಯದಲ್ಲಿ ಘಟಿಸಬಹುದಾದ ಘಟನೆಗಳ ಬಗ್ಗೆ ಕೋಡಿಮಠ ಶ್ರೀಗಳು ಮತ್ತೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಈ ಬಾರಿಯ ಶುಭಕೃತ ನಾಮ ಸಂವತ್ಸರದ ಫಲವಾಗಿ ರಾಜ್ಯದಲ್ಲಿ ಮಳೆ, ಗುಡುಗು, ಮಿಂಚಿನ ಮೂಲಕ ಪ್ರಕೃತಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಲಿದೆ. ಬಯಲು ಸೀಮೆ ಮಲೆನಾಡಾಗಲಿದೆ, ಮಲೆನಾಡು ಬಯಲು ಸೀಮೆಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದು ಈ ಸಂವತ್ಸರ ಅಂತ್ಯದ ವರೆಗೂ ಇರಲಿದೆ. ಮೇಘ ಇನ್ನೂ ಘರ್ಜಿಸೀತು, ಭೂಮಿ ತಲ್ಲಣಗೊಂಡು, ಭೂಮಿ ಕಂಪಿಸೀತು, ಕೆರೆ ಕಟ್ಟೆ ಒಡೆದು, ಗುಡ್ಡಗಳು ಕುಸಿದೀತು, ಹಿಂಗಾರು ಮಳೆ ಕಡಿಮೆಯಾದೀತು, ಅಕಾಲಿಕ ಮಳೆ ಹಲವು ಅನಾಹುತ ಉಂಟುಮಾಡೀತು ಎಂದಿದ್ದಾರೆ ಶ್ರೀಗಳು.




ರಾಜಕೀಯ ವಿದ್ಯಮಾನಗಳ ಬಗ್ಗೆ ಭವಿಷ್ಯ ನುಡಿದಿರುವ ಅವರು, ದೇಶಕ್ಕೆ ಕಷ್ಟ, ಭಂಗ ಉಂಟಾಗಲಿದೆ. ರಾಜಕೀಯ ಕಲಹಗಳು ಆಗಲಿವೆ ಎಂದಿದ್ದಾರೆ. ಇನ್ನು ರೋಗ ರುಜಿನ ಹೆಚ್ಚಲಿದೆ. ಕಳ್ಳರ ಕಾಟ, ಅಪಮೃತ್ಯು, ಕೊಲೆ, ಮತೀಯ ಗಲಭೆ ಹೆಚ್ಚಾಗಲಿವೆ. ರಾಜ್ಯ ಮಟ್ಟದ ಗೊಂದಲಗಳು, ಸಾವು ನೋವು ಆಗುವು ಲಕ್ಷಣ ಬಹಳಷ್ಟು ಸ್ಪಷ್ಟವಿದೆ ಎಂದೂ ಅವರು ಭವಿಷ್ಯ ನುಡಿದಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಶ್ರೀ ಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರ ಭವಿಷ್ಯಗಳು ಪ್ರಸಿದ್ಧವಾಗಿದ್ದು, ಅವರು ನುಡಿದ ಭವಿಷ್ಯ ಹಲವು ಬಾರಿ ನಿಜವಾಗಿದೆ.



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo