Slider

*ವಿದ್ಯಾರ್ಥಿಗಳ ವಿನೂತನ ಕಾರ್ಯಕ್ರಮ: ಹರ್ ಘರ್ ತಿರಂಗಾ ಬದಲಿಗೆ ಹರ್​ ಗಲ್​ ಪೆ ತಿರಂಗಾ ಅಭಿಯಾನ..!*3-8-2022


ದೇಶ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಸಕಲ ಸಿದ್ಧತೆ ನಡೆಯುತ್ತಿದ್ದು, ಇದರ ಅಂಗವಾಗಿ ಹರ್​ ಘರ್ ತಿರಂಗಾ ಅಭಿಯಾನ ಆರಂಭಗೊಂಡಿದೆ.

ಆಗಸ್ಟ್​​ 2ರಿಂದ ಆಗಸ್ಟ್​ 15ರವರೆಗೆ ಈ ಅಭಿಯಾನ ನಡೆಸಲು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಕರೆ ನೀಡಿದ್ದಾರೆ. ಆಗಸ್ಟ್​​ 13ರಿಂದ 15ರವರೆಗೆ ಮನೆಯ ಮೇಲೆ ‘ಹರ್​ ಘರ್ ತಿರಂಗಾ’ ಅಭಿಯಾನದ ಪ್ರಯುಕ್ತ ತ್ರಿವರ್ಣ ಧ್ವಜಾರೋಹಣ ಮಾಡುವಂತೆ ದೇಶವಾಸಿಗಳಿಗೆ ಅವರು ಮನವಿ ಮಾಡಿದ್ದಾರೆ.




ಇನ್ನು ಗುಜರಾತ್​​ನಲ್ಲಿ 1 ಕೋಟಿ ಮನೆ ಹಾಗೂ ಕಚೇರಿಗಳಲ್ಲಿ ತ್ರಿವರ್ಣ ಧ್ವಜಾರೋಹಣ ನಡೆಯಲಿದೆ. ಇದರ ಅಂಗವಾಗಿ ಜಾವರಚಂದ್ ಮೇಘಾನಿ ಪ್ರಾಥಮಿಕ ಶಾಲೆಯ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೋಸ್ಕರ ಹೊಸ ಕಾರ್ಯಕ್ರಮ ಆಯೋಜನೆಗೊಂಡಿದೆ. ಹರ್ ಘರ್ ತಿರಂಗಾ ಬದಲಿಗೆ ಹರ್​ ಗಲ್​(ಕೆನ್ನೆ) ಪೆ ತಿರಂಗಾ ಅಭಿಯಾನ ಆರಂಭ ಮಾಡಿದೆ. ಇಲ್ಲಿನ ಪ್ರತಿ ಮಕ್ಕಳ ಕೆನ್ನೆ ಮೇಲೆ ಭಾರತದ ತಿರಂಗಾ ಚಿತ್ರ ಬರೆಯಲಾಗ್ತಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಮೂಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo