Slider


ಬ್ರಹ್ಮಾವರ : ಅಂತರ್ ರಾಜ್ಯ ಕಳ್ಳರ ಬಂಧನ : ಚಿನ್ನಾಭರಣ ಮತ್ತು 2 ಕಾರುಗಳು ಸಹಿತ 20 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳು ವಶ 04.08.2022

 ಬ್ರಹ್ಮಾವರ : ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧ ತಡೆಗಾಗಿ ಪೊಲೀಸ್ ಅಧೀಕ್ಷಕರವರ ಆದೇಶದಂತೆ, ಬ್ರಹ್ಮಾವರ ವೃತ್ತದ ವ್ಯಾಪ್ತಿಯಲ್ಲಿ ವಿಶೇಷ ತಂಡ ರಚಿಸಿದ್ದು, ಹಾವಂಜೆ ಗ್ರಾಮದ ಶೇಡಿಗುಳಿ ಎಂಬಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಸ್ಯಾಂಟ್ರೋ ಕಾರನ್ನು ನಿಲ್ಲಿಸಿ ಪರಿಶೀಲಿಸಿದಾಗ ಕಾರಿನಲ್ಲಿ ಮನೆಯ ಬಾಗಿಲು ಒಡೆಯುವ ಕಬ್ಬಿಣದ ರಾಡ್‌, ಬೆಳ್ಳಿಯ ಆಭರಣಗಳು ಪತ್ತೆಯಾಗಿದ್ದು, 3 ಜನ ಕುಖ್ಯಾತ ಅಂತರ್‌ ರಾಜ್ಯ ಮನೆ ಕಳ್ಳರನ್ನು ಬಂಧಿಸಲಾಗಿದೆ.


ಹೆಬ್ರಿ ಶಿವಪುರ ಗ್ರಾಮ ದಿಲೀಪ್‌ ಶೆಟ್ಟಿ, ತಮಿಳುನಾಡಿನ ರಾಜನ್ ಹಾಗೂ ಷಣ್ಮುಗಂರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಸ್ಯಾಂಟ್ರೋ ಮತ್ತು ಓಮಿನಿ ಕಾರ್,   ಸರಿಸುಮಾರು 20 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳುದರ ಮೂಲಕ ಈ ತಂಡದಿಂದ ನಡೆದ 5  ಮನೆಯ ಕಳ್ಳತನದ ಪ್ರಕರಣವನ್ನು ಭೇದಿಸಲಾಗಿದೆ.


ದಿಲೀಪ್‌




ಶೆಟ್ಟಿ ಕುಖ್ಯಾತ ಮನೆ ಕಳ್ಳರೊಂದಿಗೆ ಹಾಸನ, ದ.ಕ ಮತ್ತು ಉಡುಪಿ ಭಾಗದಲ್ಲಿ ಮನೆ ಕಳ್ಳತನ ನಡೆಸುತ್ತಿದ್ದನು. ರಾಜನ್ ತನ್ನ 19ನೇ ವಯಸ್ಸಿನಿಂದ ಕಳ್ಳತನ ಮಾಡುತ್ತಿದ್ದು, ಆತನ ವಿರುದ್ಧ ಕರ್ನಾಟಕ, ಕೇರಳ ಹಾಗೂ ತಮಿಳುನಾಡುನಲ್ಲಿ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಕರ್ನಾಟಕ ರಾಜ್ಯದ ಚಿಕ್ಕಮಗಳೂರು-1, ಕುಮಟಾ-1, ಸುರತ್ಕಲ್‌ -4 ಹಾಗೂ ಕೇರಳ ರಾಜ್ಯದ ತಿರುಷೂರು-4, ಪಟ್ಟಂಬಿ-4, ತರೂರು-1, ತಮಿಳುನಾಡು ರಾಜ್ಯದ ನೀಲಗಿರಿ-3 ಪ್ರಕರಣಗಳು ದಾಖಲಾಗಿರುತ್ತದೆ. ಒಟ್ಟು ಉಡುಪಿ ಜಿಲ್ಲೆ ಸೇರಿ ರಾಜನ್‌ ಮೇಲೆ 22 ಕೇಸು ದಾಖಲಾಗಿದ್ದು ವಿವಿಧ ಠಾಣೆಗಳಲ್ಲಿ ಜಾಮೀನು ರಹಿತ ವಾರೆಂಟು ಇರುತ್ತದೆ. ದಿಲೀಪ್‌ ಶೆಟ್ಟಿ ವಿರುದ್ದ ಈ ಹಿಂದೆ ಹಾಸನದ ಅರಸೀಕೆರೆ, ಬೆಂಗಳೂರಿನ ಆರ್.ಎಂ.ಸಿ ಯಾರ್ಡ್‌, ನಂದಿನಿ ಲೇಜೌಟ್‌‌ ಮತ್ತು ಮಂಡ್ಯದ ನಾಗಮಂಗಲ, ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ, ಅಬಕಾರಿ, ಹನಿ–ಟ್ಯಾಪ್‌ ಪ್ರಕರಣ ಹಾಗೂ ಹೆಬ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ ಹಾಗೂ ಜಾಮೀನು ರಹಿತ ವಾರೆಂಟು ಇರುತ್ತದೆ. ದಿಲೀಪ್ ಶೆಟ್ಟಿ ಹಾಗೂ ರಾಜನ್ ಇವರನ್ನು ವಿಚಾರಿಸಿದಾಗ ಬ್ರಹ್ಮಾವರ ಠಾಣಾ ಸರಹದ್ದಿನ 2 ರಾತ್ರಿ ಮನೆ ಕಳ್ಳತನ, ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ-1 ರಾತ್ರಿ ಮನೆ ಕಳ್ಳತನ ಹಾಗೂ ಅಜೆಕಾರು ಠಾಣಾ ವ್ಯಾಪ್ತಿಯಲ್ಲಿ 2 ರಾತ್ರಿ ಮನೆ ಕಳ್ಳತನ ಪ್ರಕರಣಗಳಲ್ಲಿ ಸ್ವತ್ತು ಕಳವು, ಚಿನ್ನಾಭರಣ ಕಳವು ಮಾಡಿರುವುದು ತಿಳಿದು ಬಂದಿರುತ್ತದೆ. ಕಳ್ಳತನದ ಮಾಲುಗಳನ್ನು ಬೆಂಗಳೂರು ಮತ್ತು ಕೊಯಮತ್ತೂರಿನಲ್ಲಿ ಅಡವಿಟ್ಟಿರುವುದನ್ನು ಸ್ವಾಧೀನಪಡಿಸಿ ಕೊಳ್ಳಲಾಗಿದೆ. ದಿಲೀಪ್ ಶೆಟ್ಟಿ ಹಾಗೂ ರಾಜನ್‌ ಕಡೆಯಿಂದ ಸುಮಾರು 13 ಲಕ್ಷ ಬೆಲೆ ಬಾಳುವ ಚಿನ್ನಾಭರಣ , ಬೆಳ್ಳಿ ಆಭರಣ 500 ಗ್ರಾಂ, ಮೌಲ್ಯ ರೂ 20,000/-, ಕೃತ್ಯಕ್ಕೆ ಬಳಸಿದ ಸ್ಯಾಂಟ್ರೋ ಕಾರು ಮೌಲ್ಯ 5 ಲಕ್ಷ, ಒಂದು ಓಮಿನಿ ಕಾರು, ಮೌಲ್ಯ 2 ಲಕ್ಷ ಹಾಗೂ ಸುಮಾರು 20 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು 5 ಮನೆ ಕಳ್ಳತನ ಪ್ರಕರಣಗಳನ್ನು ಭೇಧಿಸಲಾಗಿದೆ.



ಜಿಲ್ಲಾ ಪೊಲೀಸ್‌ ಅಧೀಕ್ಷರಾದ ವಿಷ್ಣುವರ್ಧನ್‌ ಎನ್‌, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಎಸ್.ಟಿ. ಸಿದ್ದಲಿಂಗಪ್ಪ ರವರ ಮಾರ್ಗದರ್ಶನದಂತೆ ಈ ಕಾರ್ಯಾಚರಣೆಯಲ್ಲಿ ಸುಧಾಕರ ಎಸ್‌ ನಾಯ್ಕ, ಪೊಲೀಸ್‌ ಉಪಾಧೀಕ್ಷರು, ಉಡುಪಿ ಉಪ ವಿಭಾಗ,  ಅನಂತ ಪದ್ಮನಾಭ ಸಿ.ಪಿ.ಐ ಬ್ರಹ್ಮಾವರ, ಬ್ರಹ್ಮಾವರ ಠಾಣಾ,  ಪಿ.ಎಸ್‌.ಐ ಗುರುನಾಥ ಬಿ ಹಾದಿಮನಿ, ತನಿಖಾ ಪಿ.ಎಸ್‌.ಐ ಮುಕ್ತಾಬಾಯಿ, ಕೋಟ ಠಾಣಾ ಪಿ.ಎಸ್.ಐ ಮಧು ಬಿ.ಇ, ಬ್ರಹ್ಮಾವರ ಠಾಣಾ ಪ್ರೊಬೆಷನರಿ ಪಿ.ಎಸ್‌.ಐ.  ಸುಬ್ರಮಣ್ಯ ದೇವಾಡಿಗ, ಬ್ರಹ್ಮಾವರ ಠಾಣಾ ಸಿಬ್ಬಂದಿಯವರಾದ ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್‌, ಮೊಹಮ್ಮದ್‌ ಅಜ್ಮಲ್‌, ರಾಘವೇಂದ್ರ ಕಾರ್ಕಡ, ಸಬಿತಾ, ಸುರೇಶ ಬಾಬು, ದಿಲೀಪ್, ಅಣ್ಣಪ್ಪ ಹಾಗೂ ಕೋಟ ಠಾಣಾ ಸಿಬ್ಬಂದಿಯವರಾದ ಪ್ರಸನ್ನ, ರಾಘವೇಂದ್ರ, ದುಂಡಪ್ಪ, ಗೋಪಾಲ ನಾಯ್ಕ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಪಾಲ್ಗೊಂಡಿರುತ್ತಾರೆ.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo