ಮಂಗಳೂರು; ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಮೀನುಗಾರಿಕೆ ಇಲಾಖೆ, ಕರಾವಳಿ ಕಾವಲು ಪಡೆ ಹಾಗೂ ವಿವಿಧ ಮೀನುಗಾರಿಕಾ ಸಂಘಗಳ ಸಹಯೋಗದಲ್ಲಿ ಆಗಸ್ಟ್ 12ರ ಶುಕ್ರವಾರ ಧಕ್ಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 75 ಬೋಟ್‍ಗಳ ರ್‍ಯಾಲಿಗೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಚಾಲನೆ ನೀಡಿದರು.
ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ 75 ಬೋಟುಗಳಿಗೆ ರಾಷ್ಟ್ರ ಧ್ವಜವನ್ನು ಕಟ್ಟಿ ದೇಶಾಭಿಮಾನವನ್ನು ಪ್ರಕಟಿಸುವ ಮತ್ತು ಪಸರಿಸುವ ಕೆಲಸ ನಡೆಯುತ್ತಿರುವುದು ಸಂತಸದ ವಿಚಾರ. ಎರಡು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆಯು ಇದೀಗ ಮತ್ತೆ ಗರಿಗೆದರುತ್ತಿದೆ. ಈ ವರ್ಷ ಮತ್ಸ್ಯೋದ್ಯಮದಲ್ಲಿ ಹೆಚ್ಚಿನ ಲಾಭ ದೊರೆತು ಮೀನುಗಾರಿಕೆ ಪ್ರಗತಿ ಕಾಣಲಿ ಎಂದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ