ಉಡುಪಿ : ತಾಲೂಕಿನ ಕೊರಂಗ್ರಪಾಡಿ ಗ್ರಾಮದ ಗ್ಯಾರೇಜ್ ಬಳಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದು ಕದಿಯಲು ಯತ್ನಿಸಿರುವ ಘಟನೆ ನಡೆದಿದೆ.
ಪ್ರಜ್ಞಾ ಶೆಟ್ಟಿಗಾರ್ ಎಂಬ ವಿದ್ಯಾರ್ಥಿನಿ ಉಡುಪಿಯಲ್ಲಿ ಕಂಪ್ಯೂಟರ್ ತರಗತಿ ಮುಗಿಸಿಕೊಂಡು ವಾಪಾಸು ಮನೆ ಕಡೆಗೆ ಬರುತ್ತಿರುವಾಗ ಕೊರಂಗ್ರಪಾಡಿಯ ಗ್ಯಾರೇಜ್ ಬಳಿ ಬೈಕ್ ನಲ್ಲಿ ಬಂದ ಓರ್ವ ಅಪರಿಚಿತ ವ್ಯಕ್ತಿ ಏಕಾಏಕಿ ಪ್ರಜ್ಞಾ ಅವರ ಎದುರು ಬಂದು ಕುತ್ತಿಗೆಯಲ್ಲಿ ಇದ್ದ ಚಿನ್ನದ ಸರವನ್ನು ಎಳೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಪ್ರಜ್ಞಾ ಅವರು ಜೋರಾಗಿ ಬೊಬ್ಬೆ ಹಾಕಿದಾಗ ಆರೋಪಿತನು ಬೈಕ್ ಸಮೇತ ಪರಾರಿಯಾಗಿದ್ದಾನೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ