Slider


ಮಂಗಳೂರು:-ವಿದ್ಯಾರ್ಥಿಗಳ ರಕ್ಷಾ ಬಂಧನವನ್ನು ಕತ್ತರಿಸಿ ಬಿಸಾಕಿದ ಚರ್ಚ್ ಶಾಲೆ 12-8-2022

 


ಮಂಗಳೂರು:-ಇಲ್ಲಿನ ಕಾಟಿಪಾಳ್ಳದಲ್ಲಿರುವ ಚರ್ಚ್ ಶಾಲೆಯೊಂದರಲ್ಲಿ ರಕ್ಷಾಬಂಧನವನ್ನು ಕಟ್ಟಿಕೊಂಡು ಬಂದ ವಿದ್ಯಾರ್ಥಿಗಳ ರಕ್ಷಾಬಂಧನವನ್ನು ತುಂಡರಿಸಿ ಹಾಕಿದ ಘಟನೆ ಗುರುವಾರ ನಡೆದಿದೆ.


ಹಿಂದೂ ಸಮುದಾಯದ ಈ ಆಚರಣೆಗೆ ಅವಮಾನ ಮಾಡಿದ ಚರ್ಚ್ ಶಾಲೆಯ ವಿರುದ್ಧ ಪೋಷಕರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಶಾಲೆಯ ಮುಂದೆ ಜಮಾಯಿಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಘಟನೆ ನಡೆದಿತ್ತು.

 ನಿನ್ನೆ ಕಾಟಿಪಳ್ಳ-ಗಣೇಶಪುರ ಸಮೀಪದ "ಇನ್ ಫೆಂಟ್ ಮೇರಿ ಚರ್ಚ್ ಶಾಲೆ"ಯಲ್ಲಿ ಈ ಘಟನೆ ಆಗಿತ್ತು.




"ರಕ್ಷೆ ಅಂದರೆ ಅದು devil's tie (ದೆವ್ವದ ಹಗ್ಗ), ಅದನ್ನು ಕಟ್ಟಿಕೊಳ್ಳಬಾರದು" ಎಂದು ಮುಗ್ಧ ಮಕ್ಕಳನ್ನು ಬೆದರಿಸಿದ್ದ ಶಿಕ್ಷಕಿ ವಿನ್ನಿ, ಮತ್ತು ರಕ್ಷೆಯನ್ನು ಬಲವಂತವಾಗಿ ಕತ್ತರಿಸಿ ಬಿಸಾಕಲು ಹೇಳಿದ್ದ ಮುಖ್ಯೋಪಾಧ್ಯಾಯಿನಿ ಇಂದು ಎಲ್ಲರ ಮುಂದೆ ಕೈ ಮುಗಿದು, "ನಮ್ಮಿಂದ ತಪ್ಪಾಗಿದೆ. ಇನ್ನು ಮುಂದೆ ಇಂತಹ ಘಟನೆಗಳು ನಡೆಯುವುದಿಲ್ಲ, ದಯವಿಟ್ಟು ಕ್ಷಮಿಸಿ" ಎಂದು ಕ್ಷಮೆಯಾಚಿಸಿದ್ದಾರೆ.


ಇದೇ ಸಂದರ್ಭದಲ್ಲಿ ಪೋಷಕರಲ್ಲಿ ಒಬ್ಬರು ಸ್ವತಃ ಫಾದರ್ ಅವರಿಗೇ ರಕ್ಷೆಯನ್ನು ಕಟ್ಟಿದರು, ಮತ್ತು ರಕ್ಷೆಯ ಮಹತ್ವವನ್ನು ಫಾದರ್ ಅವರೇ ವಿವರಿಸುತ್ತಾ, "ರಕ್ಷೆ ಈ ದೇಶದ ಗೌರವದ ಸಂಕೇತ, ಕೆಲವು ಮನಸ್ಥಿತಿಯವರು ಇದರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ, ದಯವಿಟ್ಟು ಅವರ ಮಾತಿಗೆ ಬೆಲೆ ಕೊಡಬೇಡಿ" ಎಂದು ವಿನಂತಿಸಿದರು. 



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo