Slider

ಮಳಲಿ ಮಸೀದಿ ಪ್ರಕರಣ:-ಆ.10ಕ್ಕೆ ತೀರ್ಪು ಮುಂದೂಡಿಕೆ 1-8-2022

 


ಮಂಗಳೂರು: ನ್ಯಾಯಾಧೀಶರು ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಮಳಲಿಪೇಟೆ ಮಸೀದಿ ಪ್ರಕರಣವನ್ನು ಆ.10ಕ್ಕೆ ಮುಂದೂಡಿ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಆದೇಶಿಸಿದೆ.


 ಮಳಲಿ ಮಸೀದಿಗೆ ಸಂಬಂಧಿಸಿದಂತೆ ವಾದ-ಪ್ರತಿವಾದಗಳನ್ನು ಮೂರನೇ ಸಿವಿ ನ್ಯಾಯಾಲಯವುತೀರ್ಪು ನೀಡುವ ಸಂದರ್ಭದಲ್ಲಿದ್ದಾಗ ಸ್ಥಳೀಯರಾದ ಮನೋಜ್‍ಕುಮಾರ್‍ಧನಂಜಯ ಮತ್ತು ಹಲವರು ಮಳಲಿ ಮಸೀದಿಗೆ ಸಂಬಂಧಿಸಿದ ತೀರ್ಪು ಪ್ರಕಟಿಸದಂತೆತಡೆಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ವಿಚಾರಣೆಯನ್ನುಕೈಗೆತ್ತಿಕೊಂಡರಾಜ್ಯ ಹೈಕೋರ್ಟ್, ಉಚ್ಚ ನ್ಯಾಯಾಲಯಆದೇಶ ನೀಡುವವರೆಗೆ ಕೆಳಗಿನ ನ್ಯಾಯಾಲಯಗಳು ತೀರ್ಪು ಪ್ರಕಟಿಸದಂತೆಆದೇಶ ನೀಡಿದ್ದು, ಸಿವಿಲ್ ನ್ಯಾಯಾಲಯವುತೀರ್ಪು ಪ್ರಕಟಿಸದಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. 




ಇಂದು ಸಿವಿಲ್ ನ್ಯಾಯಾಲಯವುತೀರ್ಪು ನೀಡುತ್ತಿದ್ದು, ಇದೀಗ ನ್ಯಾಯಾಧೀಶರ ವರ್ಗಾವಣೆಯಿಂದಾಗಿ ಪ್ರಕರಣದತನಿಖೆಯನ್ನುಆಗಸ್ಟ್ 10ಕ್ಕೆ ಮುಂದೂಡಿದೆ.



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo