ಸಾಲಿಗ್ರಾಮ : ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಮೀನು ಮಾರುಕಟ್ಟೆ ಇದ್ದರು ಅದರ ಅವ್ಯವಸ್ಥೆಯು ಅಗಾಧವಾಗಿದೆ.
ಇತ್ತೀಚೆಗೆ ಸ್ಥಳೀಯ ಶಾಸಕರ ನಿಧಿಯಿಂದ ಹಲವಾರು ಅಭಿವೃದ್ಧಿ ಕಾಮಗಾರಿ ನಡೆದಿವೆ ಅದರಲ್ಲೂ ಶಿಥಿಲವಾಗಿದ್ದ ಮೀನುಮಾರುಕಟ್ಟೆ ನೂತನವಾಗಿ ನಿರ್ಮಾಣಗೊಂಡಿದೆ.
ಆದರೆ ಕಳೆದ ಕೆಲವು ದಿನಗಳಿಂದ ಸಾಲಿಗ್ರಾಮ ವ್ಯಾಪ್ತಿಯ ಪ್ರದೇಶಗಳಿಗೆಲ್ಲ ವಿದ್ಯುತ್ ಪೂರೈಕೆ ಇದ್ದರೂ ಮೀನುಮಾರುಕಟ್ಟೆಗೆ ವಿದ್ಯುತ್ ಪೂರೈಕೆ ಮಾತ್ರ ಆಗುತ್ತಿಲ್ಲ.
ಇದರಿಂದ ಮಹಿಳಾ ಮೀನುಮಾರಾಟಗಾರರು ರಾತ್ರಿ 9:00ಯ ವರೆಗೆ ಕತ್ತಲಲ್ಲಿ ಮೀನು ಮಾರಬೇಕಾದ ಪರಿಸ್ಥಿತಿ ಎದುರಾಗಿದೆ. ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದೆ ಮೀನು ಮಾರಾಟಕ್ಕೆ ಕತ್ತರಿಬಿದ್ದಿದೆ ಎಂಬುವುದಾಗಿ ತಮ್ಮ ದುಃಖವನ್ನು ಹೊರಹಾಕಿದ್ದಾರೆ.
ಇದಲ್ಲದೆ ಮೀನಿನ ನೀರು ಹೋಗಲು ಇಂಗುಗುಂಡಿ ನಿರ್ಮಾಣವಾಗಿದ್ದು ಗುಂಡಿಯಲ್ಲಿ ಭರ್ತಿಯಾದ ನೀರನ್ನು ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳು ತೆಗೆದುಕೊಂಡು ಹೋಗಿ ಬೇರೆ ಕಡೆ ಬಿಡುತ್ತೇವೆ ಎಂದು ಹೇಳಿದ ಮಾತಿನಲ್ಲಿ ವಿಫಲರಾಗಿದ್ದು ತಿಳಿದುಬಂದಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ