ಉಡುಪಿ : ಕಾಪು ಬಜರಂಗದಳದ ಪ್ರಮುಖ ಸುಧೀರ್ ಸೋನಾ ಮನೆಗೆ ಭಾನುವಾರ ಬೆಳಿಗ್ಗೆ ನಾಲ್ಕು ಮಂದಿ ಯುವಕರ ತಂಡ ಆಯುಧದೊಂದಿಗೆ ಬಂದಿರುವ ಘಟನೆ ನಡೆದಿದ್ದು, ಈ ಬಗ್ಗೆ ದೂರು ದಾಖಲಾಗಿದೆ.
ಸುಧೀರ್ ಸೋನಾ ಮನೆಗೆ ಬಂದ ಯುವಕರ ತಂಡ, ‘ಆಶಿಫ್’ ಎಂಬವರು ಮೇಲೆ ಕಾರಿನಲ್ಲಿ ಇದ್ದಾರೆ ಅವರಿಗೆ ನಿಮ್ಮ ಬಳಿ ಮಾತನಾಡಲು ಇದೆ ಎಂದು ಮನೆಯಿಂದ ಹೊರಗೆ ಬರುವಂತೆ ಹೇಳಿದ್ದಾರೆ.ಇನ್ನು ಯುವಕರ ಮಾತಿನಿಂದ ಅನುಮಾನಗೊಂಡು ಸುಧೀರ್ ಸೋನಾ ಅವರು ಮನೆಯಿಂದ ಹೊರಹೋಗದೇ ತಕ್ಷಣವೇ ಕಾಪು ಪೋಲಿಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ.
ಯುವಕರು ಸುಧಿರ್ ಮನೆಯಿಂದ ಹಿಂತಿರುಗುವ ವೇಳೆ ಯುವಕರ ಬಳಿ ಹರಿತವಾದ ಆಯುಧ ಇರುವುದು ಸುಧಿರ್ ಅವರ ಪತ್ನಿಯ ಗಮನಕ್ಕೆ ಬಂದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಓರ್ವನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ