ಕುಂದಾಪುರ : ಮಿನಿ ವಿಧಾನಸೌಧದ ಎದುರುಗಡೆ ಇಂದು ಕುಂದಾಪುರದ ಆಸುಪಾಸಿನ ವಿದ್ಯಾರ್ಥಿಗಳು ಜೊತೆ ಸೇರಿ ಮಂಗಳೂರು ವಿಶ್ವವಿದ್ಯಾಲಯದ ವಿರುದ್ದ ಧರಣಿ ನಡೆಸಿದರು.
ಇತ್ತೀಚಿನ ದಿನಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ವಿಧ್ಯಾರ್ಥಿಗಳಿಗೆ ಹಲವು ಸಮಸ್ಯೆಗಳು ಎದುರಾಗಿದ್ದು ವಿದ್ಯಾರ್ಥಿಗಳು ಇದರ ವಿರುದ್ಧ ಎಷ್ಟೇ ಮನವರಿಕೆ ಮಾಡಿದರು ವಿಶ್ವವಿದ್ಯಾಲಯ ಒಂದಲ್ಲ ಒಂದು ರೀತಿಯ ನಿರಂತರ ಸಮಸ್ಯೆಯನ್ನು ವಿಧ್ಯಾರ್ಥಿಗಳ ಭವಿಷ್ಯದಲ್ಲಿ ತಂದೊಡ್ಡುತ್ತಿದೆ.
ಇನ್ನು ಧರಣಿ ವಿಷಯಕ್ಕೆ ಸಂಬಂಧಿಸಿದಂತೆ ಕುಂದಾಪುರ ಭಾಗದ ಆಸುಪಾಸಿನ ವಿದ್ಯಾರ್ಥಿಗಳು ಸಂಘಟಿತರಾಗಿ ತಮಗಾದ ಸಮಸ್ಯೆಯ ವಿರುದ್ಧ ಕುಂದಾಪುರದ ಶಾಸ್ತ್ರೀ ವೃತ್ತದಿಂದ ಮಿನಿ ವಿಧಾನಸೌಧದ ವರೆಗೆ ಕಾಲ್ನಡಿಗೆಯಲ್ಲಿ ಸಾಗಿ ಮಿನಿ ವಿಧಾನಸೌಧವನ್ನು ಮುತ್ತಿಗೆ ಹಾಕಿದರು.
ಇನ್ನು ವಿಧ್ಯಾರ್ಥಿಗಳು ಈಗಾಗಲೇ ನಾಲ್ಕನೇ ಸೆಮಿಸ್ಟರ್ ನ ಪರೀಕ್ಷೆ ಬರೆದಿದ್ದು ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ ಜೊತೆಗೆ ಅಂಕಪಟ್ಟಿಯನ್ನು ನೀಡಿರುವುದಿಲ್ಲ. ಅದಲ್ಲದೆ ಪ್ರಸ್ತುತ ಐದನೇ ಸೆಮಿಸ್ಟರ್ ನ ಪರೀಕ್ಷೆಯ ಫಲಿತಾಂಶ ಬಂದಿದ್ದು ವಿಧ್ಯಾರ್ಥಿಗಳು ಫಲಿತಾಂಶವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.
ಐದನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶದಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಲಾಗಿದ್ದು ಅದಲ್ಲದೆ ಬರೆದಿದ್ದಕ್ಕೆ ಸರಿಯಾದ ಅಂಕಗಳನ್ನು ವಿಶ್ವ ವಿದ್ಯಾಲಯ ನೀಡಿಲ್ಲ ಎಂದು ವಿಧ್ಯಾರ್ಥಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ವಿಧ್ಯಾರ್ಥಿಗಳ ಜೊತೆ ಮಾತನಾಡಿದ ಮಿನಿ ವಿಧಾನಸೌಧದ ಅಧಿಕಾರಿಯವರು ಇನ್ನು ಎರಡು ಮೂರು ವಾರದ ಒಳಗೆ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವುದಾಗಿ ಪ್ರತಿಕ್ರಿಯೆ ನೀಡಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ