ಕಾರ್ಕಳ: ಮನೆಯಲ್ಲೇ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿದ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದಲ್ಲಿ ನಡೆದಿದೆ.
ಸಾಣೂರು ಮೈಲೊಟ್ಟು ನಿವಾಸಿ ಅಬ್ದುಲ್ ರಹಿಮಾನ್(30),ಸಾಣೂರು ನಿವಾಸಿ ರಜಾಕ್ ಹಾಗೂ ಶರೀಫ್ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 10 ಸಾವಿರ ರೂ ಮೌಲ್ಯದ 27 ಕೆಜಿ ದನದ ಮಾಂಸ ಹಾಗೂ ಕತ್ತಿ, ದನ ಸಾಗಾಟಕ್ಕೆ ಬಳಸಲಾದ ಗೂಡ್ಸ್ ವಾಹನವನ್ನು ಕಾರ್ಕಳ ನಗರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಕಳವು ಮಾಡಿ ತಂದಿದ್ದ ದನವನ್ನು ಆರೋಪಿ ಅಬ್ದುಲ್ ರಹಿಮಾನ್ ಮನೆಯ ಶೆಡ್‌ನಲ್ಲಿ ಕಡಿದು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ