ಬೈಂದೂರು : ಚಾಕಲೇಟ್ ಕವ್ವರ್ ನುಂಗಿ ಉಸಿರುಗಟ್ಟಿ ಐದು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಇಂದು ಬೈಂದೂರಿನಲ್ಲಿ ನಡೆದಿದೆ.
ಬೈಂದೂರು ತಾಲೂಕಿನ ಬವಳಾಡಿ ಮೂಲದ ಸಮನ್ವಿ (5) ಮೃತಪಟ್ಟ ಬಾಲಕಿ.
ಬಾಲಕಿ ಉಪ್ಪುಂದ ಸ್ಥಳೀಯ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯಾಗಿದ್ದು, ಇಂದು
ಶಾಲೆಯ ಬಸ್ಸಿಗೆ ಕಾಯುತ್ತಿದ್ದ ವೇಳೆ ಪ್ಲಾಸ್ಟಿಕ್ ಕವರ್ ಸಹಿತ ಚಾಕೊಲೇಟ್ ತಿಂದಾಗ ಗಂಟಲಲ್ಲಿ ಸಿಲುಕಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಸದ್ಯ ಬಾಲಕಿಯ ಮೃತದೇಹವನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಈ ಬಗ್ಗೆ
ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ