ಸುರತ್ಕಲ್: ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 21 ಶಂಕಿತ ಆರೋಪಿಗಳನ್ನು ವಿಚಾರಣೆಗಾಗಿ ಪೋಲಿಸರು ವಶಕ್ಕೆ ಪಡೆದಿದ್ದಾರೆ. 21 ಮಂದಿಯ ಪೈಕಿ ಕೆಲ ಬಜರಂಗದಳದ ಕಾರ್ಯಕರ್ತರೂ ಸೇರಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋಮು ದ್ವೇಷದ ಹಿನ್ನೆಲೆ ಫಾಝಿಲ್ ಕೊಲೆ ನಡೆದಿದೆಯಾ ಅಥವಾ ಬೇರೇನಾದರೂ ಕಾರಣ ಇದೆಯಾ ಎಂಬ ಬಗ್ಗೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಈ ಮೊದಲೇ ಕರಾವಳಿ ಉದ್ವಿಗ್ನಗೊಂಡಿದ್ದು, ಈ ಹಿನ್ನೆಲೆ ಪೋಲಿಸರ ಹೇಳಿಕೆಯ ವಿನಃ ಸುಖಾಸುಮ್ಮನೆ ವದಂತಿಗಳನ್ನು ಹರಡದಂತೆ ಮಾಧ್ಯಮಳಿಗೆ ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಕೊಲೆ ನಡೆದ ದಿನದಂದೇ ಸೆಕ್ಷನ್ 144 ಜಾರಿಯಾಗಿದ್ದು, ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 14 ಮಂದಿಯನ್ನು ಪೋಲಿಸರು ಬಂಧಿಸಿದ್ದರು. ಅನುಮಾನದ ಆಧಾರದ ಮೇರಗೆ ಶುಕ್ರವಾರ ಇನ್ನೂ 7 ಮಂದಿಯನ್ನು ಮಂಗಳೂರು ಪೋಲಿಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ