ಮಂಗಳೂರು: ಭಾರೀ ಅಲೆಗಳ ಅಬ್ಬರದ ಹಿನ್ನೆಲೆ ಪಣಂಬೂರು ಬೀಚ್ ಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಆದರೂ ಕೂಡ ಇಂದು ವೀಕೆಂಡ್ ಆದ್ದರಿಂದ ಸಮುದ್ರ ತೀರದಲ್ಲಿ ಪ್ರವಾಸಿಗರ ದಂಡೇ ಆಗಮಿಸುತ್ತಿದ್ದು, ಸೆಲ್ಫಿಯನ್ನು ತೆಗೆದುಕೊಳ್ಳುತ್ತಿದ್ದಾರೆ.
ಜಿಲ್ಲಾಡಳಿತವು ಬೀಚ್ ಬಳಿ ಹಗ್ಗ ಕಟ್ಟಿ ಬೀಚ್ ಎಂಟ್ರಿ ಬಂದ್ ಮಾಡಿದ್ದು, ಭದ್ರತಾ ಸಿಬ್ಬಂದಿ ನಿಯೋಜಿಸಿ ಸ್ಥಳದಲ್ಲಿ ಪ್ರವಾಸಿಗರ ಮೇಲೆ ಕಣ್ಣಿಡುವಂತೆ ಸೂಚಿಸಲಾಗಿದೆ.
ಆದರೂ ಕೂಡ ಹಗ್ಗದ ಸಮೀಪವೇ ನಿಂತು ಪ್ರವಾಸಿಗರು ಫೋಟೊ ಕ್ಲಿಕ್ಕಿಸುತ್ತಿದ್ದು, ನಿರ್ಬಂಧದ ಹಗ್ಗದ ಸಮೀಪಕ್ಕೆ ರಕ್ಕಸ ಗಾತ್ರದ ಅಲೆಗಳು ಬಡಿಯುತ್ತಿದೆ. ಇದ್ಯಾವುದನ್ನೂ ಲೆಕಿಸದೇ, ಜಿಲ್ಲಾಡಳಿತದ ನಿರ್ಬಂಧವನ್ನು ಕೂಡ ಪರಿಗಣಿಸದೇ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಇನ್ನೊಂದೆಡೆ ಪಣಂಬೂರು ಬೀಚ್ ನಲ್ಲಿ ಕಡಲ್ಕೊರೆತದ ಪರಿಣಾಮ ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದು, ಬೀಚ್ ವೀಕ್ಷಣೆಗೆ ನಿರ್ಮಿಸಿರುವ ವಿಹಾರ ತಾಣಗಳಿಗೆ ಅಪಾಯ ಎದುರಾಗಿದೆ.
ಐದಾರು ಅಡಿಗಳಷ್ಟು ಅಳಕ್ಕೆ ವಿಹಾರ ತಾಣಗಳಲ್ಲಿ ಅಲೆಗಳ ಕೊರೆತ ಉಂಟಾಗಿದ್ದು, ಭೀಕರ ಅಲೆಗಳು ಪಂಚಾAಗದ ಕಲ್ಲುಗಳ ಬುಡದ ಮರಳು, ಕಾಂಕ್ರೀಟ್ ಅಡಿಪಾಯವನ್ನೇ ಕೊರೆದು ಹಾಕಿದೆ. ಈ ಹಿನ್ನೆಲೆ ಪಣಂಬೂರಿನ ಲೈಟ್ ಹೌಸ್, ವಿಹಾರ ತಾಣಗಳು ಸಮುದ್ರ ಪಾಲಾಗುವ ಆತಂಕ ಎದುರಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ