ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನಾಗಪ್ಪ ನಾಯಕ ರಸ್ತೆ 2ನೇ ಕ್ರಾಸ್‌ನಲ್ಲಿರುವ ಆಲ್ ತಯ್ಯಬ್ ಆಲ್ ಖತೀಬ್ ಮನೆಯ ಕಂಪೌಡ್ ಒಳಗಡೆ ಇರುವ ಖಾಲಿ ಜಾಗಾದಲ್ಲಿ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಕೋಣವೊಂದನ್ನು ವಧೆ ಮಾಡಿರುವ ಕುರಿತು ಮಾಹಿತಿ ಪಡೆದ ನಗರ ಠಾಣೆಯ ಸಿ.ಪಿ.ಐ ದಿವಾಕರ ಮತ್ತು ಸಬ್ ಇನ್ಸಪೆಕ್ಟರ್ ಸುಮಾ ಬಿ.ಪಿ. ಹಾಗೂ ಎ.ಎಸೈಗಳಾದ ಗೋಪಾಲ ನಾಯಕ,ನಿರಂಜನ ನಾಯ್ಕ ದಾಳಿ ಮಾಡಿ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಇನಾಮುಲ್ಲಾ ಹಸನ್ ಖತೀಬ್ ತಂದೆ ಮೊಹಮ್ಮದ್ ತಯ್ಯಬ್ (27) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ನಾಗಪ್ಪ ನಾಯಕ ರಸ್ತೆ 2ನೇ ಕ್ರಾಸ್‌ನಲ್ಲಿರುವ ಆಲ್ ತಯ್ಯಬ್ ಆಲ್ ಖತೀಬ್ ಮನೆಯ ಕಂಪೌಂಡ್ ತಪಾಸಣೆ ನಡೆಸಿದಾಗ ಖಾಲಿ ಜಾಗಾದಲ್ಲಿ ಆರೋಪಿತ ಇನಾಮುಲ್ಲಾ ಹಸನ್ ಖತೀಬ್ ಈತನು ಮಾರಾಟ ಮಾಡುವ ಉದ್ದೇಶದಿಂದ ಕೋಣವನ್ನು ವಧೆ ಮಾಡಿ ಸುಮಾರು 30 ಕೆ.ಜಿ. ಮಾಂಸ ಅಜಮಾಸ ಕಿಮ್ಮತ್ತು 15,000-00 ಯನ್ನು ಸಂಗ್ರಹಿಸಿದ್ದು ಕಂಡು ಬಂದಿದ್ದು ತಕ್ಷಣ ಆತನನ್ನು ಬಂಧಿಸಿ, ಮಾಂಸವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಯಿತು.
ನಗರ ಠಾಣೆಯ ಸಬ್ ಇನ್ಸಪೆಕ್ಟರ್ ಸುಮಾ ಬಿ.ಇ. ಅವರು ನೀಡಿದ ದೂರಿನನ್ವಯ ಸಬ್ ಇನ್ಸಪೆಕ್ಟರ್ ಹೆಚ್. ಬಿ. ಕುಡಗುಂಟಿ ಅವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ