ಕುಂದಾಪುರ: ಕಾರೊಂದು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರೊಳಕ್ಕೆ ಗುರುತು ಸಿಕ್ಕದಂತಹ ಸ್ಥಿತಿಯಲ್ಲಿ ಮೃತದೇಹ ಕೂಡ ಪತ್ತೆಯಾದ ಘಟನೆ ಬೈಂದೂರು ತಾಲೂಕಿನ ಹೇನಬೇರು ಎಂಬಲ್ಲಿ ನಡೆದಿದೆ.
ಸುಟ್ಟು ಕರಕಲಾದ ಕಾರಣ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಪೋರ್ಡ್ ಕಂಪೆನಿಯ ಐಕಾನ್ ಕಾರು ಎನ್ನಲಾಗಿದ್ದು ಚಾಸ್ಸಿಸ್ ಹಾಗೂ ಇಂಜಿನ್ ನಂಬರ್ ಕೂಡ ಸುಟ್ಟು ಹೋದ ಕಾರಣ ಕಾರಿನ ಮಾಲಕರ ಪತ್ತೆ ಕೂಡ ಕಷ್ಟವಾಗಿದೆ.
ತಡರಾತ್ರಿ ಘಟನೆ ನಡೆದಿರುವ ಸಾಧ್ಯತೆಯಿದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ. ಸ್ಥಳಕ್ಕೆ ಫೋರೆನ್ಸಿಕ್ ತಜ್ಞರು ಆಗಮಿಸಿದ ಬಳಿಕವಷ್ಟೇ ಹೆಚ್ಚಿನ ಮಾಹಿತಿ ಲಭಿಸಲಿದೆ.
ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ, ಪಿಎಸ್‌ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ