ಕಾರ್ಕಳ: ಇನ್ನೋವ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಇಬ್ಬರು ಸವಾರರು ಸಾವನ್ನಪ್ಪಿದ ಘಟನೆ ಬೆಳಣ್ ಸಮೀಪದ ನಂದಳಿಕೆ ಮಾವಿನಕಟ್ಟೆ ಬಳಿ ಇಂದು ಬೆಳಿಗ್ಗೆ ನಡೆದಿದೆ. ಸ್ಥಳೀಯ ನಿವಾಸಿ ಅಣ್ಣ ತಮ್ಮಂದಿರು ಸಂದೀಪ್ ಸತೀಶ್ ಮೃತಪಟ್ಟವರು ಎಂದು ತಿಳಿದು ಬಂದಿದೆ.
ನಿಟ್ಟೆಯಿಂದ ನಂದಳಿಕೆ ಕಡೆಗೆ ಬರುತಿದ್ದ ಬೈಕ್ ನಲ್ಲಿ ಸಂದೀಪ್ ಮತ್ತು ಸತೀಶ್ ಬರುತಿದ್ದು, ಪಡುಬಿದ್ರೆಯಿಂದ ವೇಗವಾಗಿ ಬರುತಿದ್ದ ಇನ್ನೋವಾ ಬೈಕ್ ಗೆ ಢಿಕ್ಕಿ ಹೊಡೆದಿದೆ, ಪರಿಣಾಮವಾಗಿ ಓರ್ವ ಸ್ಥಳದಲ್ಲಿ ಮೃತಪಟ್ಟಿದ್ದು ಇನ್ನೊಬ್ಬರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾರ್ಕಳ ಗ್ರಾಮಾಂತರ ಠಾಣಿ ಪೋಲಿಸರು ಸ್ಥಳಕ್ಕೆ ಅಗಮಿಸಿ ತನಿಖೆ ನಡೆಸುತಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ