ಉಡುಪಿ : ಮದುವೆ ಯಾವಾಗ ಆಗಬೇಕು ಆವಾಗನೇ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹಾಗೆನೇ ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಎಂತವರಿಗೂ ಒಂದು ಜೋಡಿ ದೇವರು ಸೃಷ್ಟಿ ಮಾಡಿರುತ್ತಾನೆ ಎಂಬ ನಂಬಿಕೆ ಎಲ್ಲರಿಗೂ ಇದೆ. ಹಾಗೆನೇ ಜೋಡಿಗಳು ಸರಿಯಾಗಿದ್ದರೆ ಇಬ್ಬರ ಜೀವನವೇ ಸುಂದರವಾಗಿರುತ್ತದೆ. ಅದಕ್ಕೆ ಸಾಕ್ಷಿಯೆಂಬಂತೆ ಜೋಡಿಯೊಂದು, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹಸೆಮಣೆಯೇರಿದೆ!
ವರನ ಎತ್ತರ 4 ಅಡಿ. ವಧುವಿನ ಎತ್ತರವೂ ಅಷ್ಟೇ. ಇದೇನೂ ಬಾಲ್ಯವಿವಾಹ ನಡೆಯುತ್ತಿದೆಯೋ ಅನ್ನೋ ಸಂಶಯ ಬರುವುದರಲ್ಲಿ ಅಚ್ಚರಿಯಿಲ್ಲ. ಕುಳ್ಳ ದೇಹದ ಜೋಡಿಯೊಂದು ಸತಿಪತಿಗಳಾಗಿ ಕೈಹಿಡಿದ ಅಪರೂಪದ ಕ್ಷಣವಿದು. ಸ್ವರ್ಗವೇ ನಾಚುವಂತಿತ್ತು ಈ ಜೋಡಿಯ ಮದುವೆಯ ಖುಷಿಯ ಸಂಭ್ರಮ.
ಕಾರ್ಕಳ ತಾಲೂಕಿನ ಜೋಡುರಸ್ತೆಯ ಕುಲಾಲ ಸಭಾಭವನದಲ್ಲಿ ಅಪರೂಪದ ಜೋಡಿಯೊಂದು ಹಸೆಮಣೆಯೇರಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯಲ್ಲಿ ವಧುವಿನ ಹೆಸರು ಶ್ರೀಕೃತಿ. ಹಿರಿಯಡ್ಕ ಓಂತಿಬೆಟ್ಟು ದಿವಂಗತ ಶ್ರೀನಿವಾಸ್ ನಾಯ್ಕ ಅವರ ಪುತ್ರಿ ಈಕೆ. ವರನ ಹೆಸರು ಹರ್ಷಿತ್ ಕುಮಾರ್. ಮಾಣಿಯ ಸಿಂಧ್ಯಾ ಚಂದ್ರೋಜಿ ರಾವ್ ಅವರ ಪುತ್ರ.
ವರ ಹರ್ಷಿತ್ ಖಾಸಗಿ ಉದ್ಯೋಗಿ. ಮದುಮಗಳು ಖಾಸಗಿ ಉದ್ಯೋಗದಲ್ಲಿ ಇದ್ದಿದ್ದು, ಈಗ ಕೆಲಸ ಬಿಟ್ಟಿದ್ದಾರೆ. ವಧು ಪ್ರತಿಭಾನ್ವಿತೆ ಕೂಡಾ ಹೌದು, ಡ್ಯಾನ್ಸ್ ಕೊರಿಯೋಗ್ರಫಿ ಅನುಭವ ಹೊಂದಿದ್ದು ಅತ್ಯಂತ ಪ್ರತಿಭಾನ್ವಿತೆ.
ಈ ಮದುವೆ ಹಿರಿಯರೇ ನಿಶ್ಚಯಿಸಿದ್ದು. ಮದುವೆ ಮಂಟಪದಲ್ಲಿ ಸಾಕಷ್ಟು ಮಂದಿ ಇದ್ದರೂ, ಎಲ್ಲರಿಗೂ ವಿಶೇಷ ಆಕರ್ಷಣೆಯಾಗಿ ಕಂಡ ಈ ವಧು ವರರನ್ನು ನೆಂಟರಿಷ್ಟರು, ಮನದುಂಬಿ ಹರಸಿ ಹಾರೈಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ