ಮಂಗಳೂರು : ಯುವತಿಯರಿಗೆ ಇತ್ತೀಚಿನ ಕಾಲದಲ್ಲಿ ಬಸ್ ಪ್ರಯಾಣ ಅಷ್ಟೊಂದು ಯೋಗ್ಯವಲ್ಲ ಎಂದು ಕಾಣುತ್ತದೆ. ಪ್ರಯಾಣದ ಸಂದರ್ಭದಲ್ಲಿ ಮಹಿಳಾ ಸೇಫ್ಟಿ ಬಗ್ಗೆ ಎಷ್ಟೇ ಕಾಳಜಿ ತಗೊಂಡರೂ ಹೆಣ್ಣು ಮಕ್ಕಳಿಗೆ ಮಾತ್ರ ಕಿರುಕುಳ ತಪ್ಪಿದ್ದಲ್ಲ. ಈಗ ಅಂತಹುದೇ ಘಟನೆಯೊಂದು ಬಸ್ಸಿನಲ್ಲಿ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಯುವತಿಯೋರ್ವಳಿಗೆ ಕಿರುಕುಳ ನೀಡಿದ ಘಟನೆಯೊಂದು ನಡೆದಿದ್ದು, ಆರೋಪಿಯನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಹಮ್ಮದ್ ಮುಸ್ತಫಾ ಬಿ.ಸಿ.ರೋಡ್ ಎಂದು ಗುರುತಿಸಲಾಗಿದೆ.
ಜೂನ್ 6ರ ರಾತ್ರಿ ಯುವತಿಯೋರ್ವಳಯ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದಾಳೆ. ಬೆಳಗ್ಗೆ 5 ಗಂಟೆಯ ಸಮಯದಲ್ಲಿ ಮಹಮ್ಮದ್ ಮುಸ್ತಫಾ ಎಂಬಾತ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಶುರುಮಾಡಿದ್ದಾನೆ. ಈ ಬಗ್ಗೆ ಕೂಡಲೇ ಯುವತಿ ಸಹ ಪ್ರಯಾಣಿಕರಲ್ಲಿ ತಿಳಿಸಿದ್ದು, ಕೂಡಲೇ ಇತರ ಪ್ರಯಾಣಿಕರು ಯುವಕನನ್ನು ತರಾಟೆಗೆ ತಗೊಂಡಿದ್ದಾರೆ.
ಮಾತಿಗೆ ಮಾತು ಬೆಳೆಯುತ್ತಿರುವಾಗಲೇ, ಬಸ್ ಮಂಗಳೂರಿನ ಪಂಪ್ ವೆಲ್ ತಲುಪಿದೆ. ಅಷ್ಟರಲ್ಲಿ, ಬಸ್ ನಿಂತಿದೆ. ಕೂಡಲೇ ಆರೋಪಿ ಯುವಕ ಇಳಿದು ತಪ್ಪಿಸಿಕೊಂಡಿದ್ದ. ಬೆಂಗಳೂರಿನ ಯುವತಿ ಯಾವುದೋ ಕಂಪನಿಯಲ್ಲಿ ಇಂಟರ್ವ್ಯೂ ಇದ್ದ ಕಾರಣಕ್ಕೆ ಮಂಗಳೂರಿಗೆ ಬಂದಿದ್ದಳು. ಇಂಟರ್ವ್ಯೂ ಮುಗಿಸಿದ ಬಳಿಕ ಜೂನ್ 7ರಂದು ಸಂಜೆ ಕಂಕನಾಡಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಈಗ ಆರೋಪಿಯನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದು ಐಪಿಸಿ 354 ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.
ಮುಸ್ತಾಫಾ ಬೆಂಗಳೂರಿನಲ್ಲಿ ಚಪ್ಪಲಿ ಅಂಗಡಿ ಹೊಂದಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಶಶಿಕುಮಾರ್ ಇಂತಹ ಕಿರುಕುಳಕ್ಕೊಳಗಾದರೆ ಮಹಿಳೆಯರು ಧೈರ್ಯದಿಂದ ದೂರು ನೀಡಿ ಎಂದಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ