ಮಹಾತ್ಮಾ ಗಾಂಧಿಯನ್ನು ಗುಂಡಿಕ್ಕಿ ಕೊಂದ ನಾಥೂರಾಮ್ ಗೋಡ್ಸೆಯ ಹೆಸರನ್ನು ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್‌ನ ರಸ್ತೆಯೊಂದಕ್ಕೆ ಇಡಲಾಗಿದ್ದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಬೋಳ ಗ್ರಾಮ ಪಂಚಾಯತ್ ಬಳಿಯಿರುವ ರಸ್ತೆಗೆ ‘ಪಡುಗಿರಿ ನಾಥೂರಾಮ್ ಗೋಡ್ಸೆ ರಸ್ತೆ’ ಎಂದು ನಾಮಫಲಕ ಹಾಕಲಾಗಿದ್ದು ಇದರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗುತ್ತಿದ್ದಂತೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು,
ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಸುನಿಲ್ ಕುಮಾರ್ ಈ ಬೋರ್ಡನ್ನು ಯಾರೋ ಖಾಸಗಿಯವರು ಹಾಕಿದ್ದಾರೆ. ಇದು ಪಂಚಾಯತ್ ನಿಂದ ಅಧಿಕೃತವಾಗಿ ಹಾಕಲಾದ ನಾಮಫಲಕವಲ್ಲ. ಈ ಬಗ್ಗೆ ಪಂಚಾಯತ್ ನವರು ಪರಿಶೀಲನೆ ನಡೆಸಲಿದ್ದಾರೆ ಎಂದಿದ್ದಾರೆ.
ಈ ವಿಚಾರವಾಗಿ ಬೋಳ ಗ್ರಾಮ ಪಂಚಾಯತ್’ಗೆ ಕಾರ್ಕಳ ಯುವ ಕಾಂಗ್ರೆಸ್ ಮುಖಂಡರು ದೇಶ ಕಂಡ ಮೊದಲ ಭಯೋತ್ಪಾದಕನ ಹೆಸರು ರಸ್ತೆಗೆ ಇಡಲಾಗಿದೆ. ಈ ಬಗ್ಗೆ ಪಿಡಿಓ ವಿಚಾರಿಸಿದಾಗ ಪಂಚಾಯತ್ ಗೂ ಈ ಬೋರ್ಡ್ ಗೂ ಸಂಬಂಧವಿಲ್ಲ, ಯಾರೋ ಕಿಡಿಗೇಡಿಗಳು ಬೋರ್ಡ್ ಹಾಕಿದ್ದಾರೆ ಎಂದು ಹೇಳುತ್ತಾರೆ. ತಕ್ಷಣ ಈ ಬೋರ್ಡನ್ನು ತೆರವುಗೊಳಿಸುವಂತೆ ಒತ್ತಾಯ ಮಾಡಿದ್ದೇವೆ, ಬೋರ್ಡ್ ತೆರವುಗೊಳಿಸದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿರುವುದಾಗಿ ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ ಹೇಳಿಕೆ ನೀಡಿದ್ದಾರೆ.
ಇನ್ನೂ ಈ ನಾಮ ಫಲಕ ವಿವಾದವಾಗುತ್ತಿದ್ದಂತೆ ಎಚ್ಚೆತ್ತ ಗ್ರಾಮ ಪಂಚಾಯತ್ ನಾಮ ಫಲಕವನ್ನು ತೆರವು ಮಾಡಿದ್ದು ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಠಾಣೆ ಎಸ್ಐ ತೇಜಸ್ವಿ ಭೇಟಿ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ