ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ತೆಳ್ಳಾರು ಪೇಟೆಯ ಅಶ್ವಥಕಟ್ಟೆ ಎಂಬಲ್ಲಿ ಮಲಗಿದ್ದ ದನವನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ಕಳ್ಳತನ ಮಾಡಿದ ಘಟನೆಯೊಂದು ನಡೆದುಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕಳ್ಳತನವಾದ ದನವು ತೆಳ್ಳಾರಿನ ಲೋಕೇಶ್ ಎಂಬುವವರದಾಗಿದ್ದು ಕಂದು ಬಣ್ಣದ 4 ವರ್ಷ ಪ್ರಾಯದ ದನವನ್ನು ಮೇಯಲು ಬಿಟ್ಟಿದ್ದರು.
ಮೇಯಲು ಬಿಟ್ಟ ದನ ವಾಪಸ್ಸು ಬರದೇ ಇದ್ದಾಗ ದನವನ್ನು ಹುಡುಕಿಕೊಂಡು ಹೋದ ಸಮಯದಲ್ಲಿ ಲೋಕೇಶ್ ಅವರ ಪರಿಚಯದ ನಾರಾಯಣ ಪೂಜಾರಿ ಎಂಬುವವರ ಮಾಹಿತಿಯಂತೆ ಇಂದು ಮುಂಜಾನೆ 1: 30 ರ ಸಮಯಕ್ಕೆ ಅಶ್ವಥಕಟ್ಟೆ ಬಳಿ ಮಲಗಿದ್ದ ದನವನ್ನು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದ ಯಾರೋ ಕಳ್ಳರು ಒಂದು ವಾಹನದಲ್ಲಿ ತುಂಬಿಸಿಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ.
ಸದ್ಯ ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ