ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಡೆದಿದ್ದ ಯುವತಿ ಮೇಲೆ ಆಸಿಡ್ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ನಾಗೇಶ್ ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಕಾಮಾಕ್ಷಿಪಾಳ್ಯ ಪೊಲೀಸರ ವಿಚಾರಣೆ ವೇಳೆ ಆರೋಪಿ ನಾಗೇಶ್, ನಾನು ಪ್ರೀತಿಸಿದ ಹುಡುಗಿ ಬೇರೆ ಯಾರಿಗೂ ಸಿಗಬಾರದು ಎಂದು ಹೀಗೆ ಮಾಡಿದೆ.ಆಸಿಡ್ ಹಾಕಬೇಕು ಎಂಬ ಉದ್ದೇಶ ನನಗಿರಲಿಲ್ಲ. ಆದರೆ ಆಕೆ ಬೇರೆ ಯಾರನ್ನೂ ಮದುವೆಯಾಗಬಾರದು ಎಂದು ಆಸಿಡ್ ಹಾಕಿದೆ. ಆದರೆ ಆಕೆ ಮೇಲೆ ಆಸಿಡ್ ಹಾಕಿ ನಾನೇ ಪ್ರತಿ ಕ್ಷಣ ಸತ್ತು ಬದುಕುತ್ತಿದ್ದೇನೆ ಎಂದಿದ್ದಾನೆ.
ನಾನು ಯುವತಿ ಕಾಲೇಜಿಗೆ ಹೋಗುವಾಗಿನಿಂದ ಆಕೆಯನ್ನು ಇಷ್ಟಪಡುತ್ತಿದ್ದೆ. ಫಾಲೋ ಮಾಡ್ತಿದ್ದೆ. ಆಕೆಯ ಮೇಲೆ ಬೇರೆ ಯಾರೂ ಕಣ್ಣಾಕದಂತೆ ವಾರ್ನಿಂಗ್ ಮಾಡಿದ್ದೆ. ಆದರೆ ಆಕೆ ತನ್ನನ್ನು ಇಷ್ಟಪಡುತ್ತಿರಲಿಲ್ಲ, ಒನ್ ಸೈಡ್ ಲವ್ ಅಂತಾ ಗೊತ್ತಾಗ್ತಿದ್ದಂತೆ ಹುಚ್ಚನಂತಾಗಿದ್ದೆ. ಹಾಗಾಗಿ ಕುಡಿತವೇ ಜೀವನವಾಯ್ತು... ನನ್ನ ಕಾಲಿಗೆ ಗುಂಡೇಟು ಹೊಡೆಯುವ ಬದಲು ನನ್ನೆದೆಗೆ ಗುಂಡೇಟು ಹೊಡೆದು ಸಾಯಿಸಬೇಕಿತ್ತು. ಮಾಡಿದ ತಪ್ಪು ಈಗ ಅರಿವಾಗಿದೆ. ಸಮಾಜದಲ್ಲಿ ಮುಂದೆ ಒಳ್ಳೆ ವ್ಯಕ್ತಿಯಾಗಿ ಬಾಳ್ತೀನಿ ಎಂದು ಕಣ್ಣೀರಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ