Slider

ಕಾರ್ಕಳ:- ಗ್ರಾಹಕರ ಸೋಗಿನಲ್ಲಿ ಬಂದು ಹಾರ್ಡ್‌ವೇರ್ ಅಂಗಡಿಯಲ್ಲಿ ಕಳ್ಳತನ 4-6-2022

 


ಕಾರ್ಕಳ: ಹಾರ್ಡ್‌ವೇರ್ ಅಂಗಡಿಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಖದೀಮರು 1. 45 ಲಕ್ಷ ರೂ. ನಗದು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದಲ್ಲಿ ನಡೆದಿದೆ. 



ಮಠದಬೆಟ್ಟು ಪರಿಸರದ ಕೆ. ದೀಪಕ್ ಭಟ್ ಎಂಬವರಿಗೆ ಸೇರಿದ ಧ್ವನಿ ಎಂಟರ್ ಪ್ರೈಸಸ್ ಎಂಬ ಹಾರ್ಡ್‌ವೇರ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. 


ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಕೆ. ದೀಪಕ್ ಭಟ್ ಅವರು ಅಂಗಡಿಯಲ್ಲಿ ಇಲ್ಲದ ಸಮಯದಲ್ಲಿ ಅಂಗಡಿಗೆ ಬಂದಿದ್ದ ಇಬ್ಬರು ಖದೀಮರು ಅಂಗಡಿಯಲ್ಲಿ ಇದ್ದ ಅಶೋಕ ಅವರ ಬಳಿ 4 ಚೀಲ ಸಿಮೆಂಟ್ ಬೇಕಾಗಿದ್ದು ಅಂಗಡಿಯ ಪಕ್ಕದಲ್ಲಿರುವ ಇಂಚರ ಎಂಬ ಮನೆಗೆ ಹಾಕುವಂತೆ ತಿಳಿಸಿದ್ದಾರೆ.



ಅದರಂತೆ ಅಶೋಕರವರು ಸಿಮೆಂಟ್ ಚೀಲವನ್ನು ಇಂಚರ ಎಂಬ ಮನೆಗೆ ಹಾಕಿ ವಾಪಾಸ್ಸು ಅಂಗಡಿಗೆ ಬಂದಾಗ ಅಂಗಡಿಯಲ್ಲಿದ್ದ ಇಬ್ಬರು ವ್ಯಕ್ತಿಗಳು ಇರಲಿಲ್ಲ. ಈ ವೇಳೆ ಅಂಗಡಿಯ ಒಳಗೆ ನೋಡಿದಾಗ ಮೇಜಿನ ಡ್ರಾವರನ್ನು ಒಡೆದು ಅದರೊಳಗಿದ್ದ 1, 45, 000 ರೂ. ಹಣವನ್ನು ಕಳವು ಮಾಡಿಕೊಂಡು ಹೋಗಿರುವುದು ತಿಳಿದು ಬಂದಿದೆ. 



 ಈ ಕುರಿತು ಕೆ. ದೀಪಕ್ ಭಟ್ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo