ಉಡುಪಿ: ನಗರ ಠಾಣೆಯ ಪೊಲೀಸರ ಮಿಂಚಿನ ಕಾರ್ಯಾ ಚರಣೆಯಿಂದಾಗ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೋರ್ವನನ್ನು ರಕ್ಷಣೆ ಮಾಡಿದ ಘಟನೆ ಗುರುವಾರ ಸಂಭವಿಸಿದೆ. ರಕ್ಷಣೆಗೆ ಒಳಗಾದ ವ್ಯಕ್ತಿಯನ್ನು ರೋಹನ್ ರಾಜೇಶ ಜತ್ತನ್ನ ಎಂದು ಗುರುತಿಸಲಾಗಿದೆ.
ಕೌಟುಂಬಿಕ ಸಮಸ್ಯೆಯಿಂದ ಖನ್ನತೆಗೆ ಒಳಗಾಗಿದ್ದ ರೋಹನ್ ರಾಜೇಶ್ ಜತ್ತನ್ನ ಎಂಬ ವ್ಯಕ್ತಿ ಉಡುಪಿ ನಗರದ ಖಾಸಗಿಲಾಡ್ಜ್ ನಲ್ಲಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಬಳಿಕ ಆತ ತನ್ನ ಮಂಗಳೂರಿನ ಸ್ನೇಹಿತ ಆದಿತ್ಯ ಅವರಿಗೆ ಕರೆ ಮಾಡಿದ್ದು, ಆದಿತ್ಯ ಕೂಡಲೇ ಮಂಗಳೂರು ಪೊಲೀಸ್ ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿದ್ದರು.
ಮಂಗಳೂರು ಪೋಲಿಸ್ ಕಂಟ್ರೋಲ್ ರೂಮಿನಿಂದ ಉಡುಪಿ ಪೊಲೀಸರಿಗೆ ಮಾಹಿತಿ ಬಂದಿದ್ದು ಕೂಡಲೇ ಉಡುಪಿ ನಗರಠಾಣೆ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ಖಾಸಗಿ ಲಾಡ್ಜ್ ಗೆ ದೌಡಿಯಿಸಿದ ಪೊಲೀಸರು ಅರೆಪ್ರಜ್ಞಾವಸ್ಥೆಯಲ್ಲಿದ್ದ ರೋಹನ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ದು ಸೂಕ್ತ ಚಿಕಿತ್ಸೆ ನೀಡಿದ್ದು ಅಪಾಯದಿಂದ ಪಾರಾಗಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ