Slider

ಬೆಂಗಳೂರು:-ಸ್ಯಾಂಡಲ್‌ವುಡ್ ಹಿರಿಯ ನಟ ಇನ್ನಿಲ್ಲ 3-6-2022


 ಬೆಂಗಳೂರು: ನಟ ಉದಯ್‌ ಹುತ್ತಿನಗದ್ದೆ (61) ಅವರು ಗುರುವಾರ ರಾಜಾಜಿನಗರದ ತಮ್ಮ ನಿವಾಸದಲ್ಲಿ ನಿಧನರಾದರು.


ಅವರಿಗೆ ಪತ್ನಿ, ನಟಿ ಲಲಿತಾಂಜಲಿ ಮತ್ತು ಇಬ್ಬರು ಪುತ್ರರು ಇದ್ದಾರೆ.



1980ರ ದಶಕದ ಕೊನೆಯಲ್ಲಿ 'ಆರಂಭ', 'ಕ್ರಮ', 'ಉಂಡೂ ಹೋದ ಕೊಂಡೂ ಹೋದ', 'ಶಿವಯೋಗಿ ಅಕ್ಕಮಹಾದೇವಿ', 'ಅಮೃತಬಿಂದು', 'ಉದ್ಭವ' ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತರಾಗಿದ್ದರು.

ಬಳಿಕ ನವರಂಗ್‌ ವೃತ್ತದ ಬಳಿ ಛಾಯಾಗ್ರಹಣ ಸ್ಟುಡಿಯೋ ಹೊಂದಿದ್ದರು. ಆನಂದರಾವ್‌ ವೃತ್ತದ ಬಳಿ ಕಲರ್‌ಲ್ಯಾಬ್‌ ನಡೆಸುತ್ತಿದ್ದರು. ಚಲನಚಿತ್ರ ಹಾಗೂ ಛಾಯಾಗ್ರಹಣ ಕ್ಷೇತ್ರದಲ್ಲಿ ಆಸಕ್ತಿ ವಹಿಸಿ ಬರುವವರಿಗೆ ಆಸರೆ ಹಾಗೂ ಉದ್ಯೋಗ ನೀಡಿದ್ದರು ಎಂದು ಅವರ ಆಪ್ತರು ಸ್ಮರಿಸಿದ್ದಾರೆ.



ಇತ್ತೀಚೆಗೆ ಅವರು ನರಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಉಸಿರಾಟದ ತೊಂದರೆಯೂ ಅವರನ್ನು ಬಾಧಿಸಿತ್ತು. ಇತ್ತೀಚೆಗಷ್ಟೇ ಚಿಕಿತ್ಸೆ ಪಡೆದಿದ್ದರು.




ಪಾರ್ಥೀವ ಶರೀರವನ್ನು ರಾಜಾಜಿನಗರದ ಅವರ ನಿವಾಸದಲ್ಲಿ ಇರಿಸಲಾಗಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಪುತ್ರ ಪ್ರಶಸ್‌ ತಿಳಿಸಿದರು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo