Slider

*ಖೇಲೋ ಇಂಡಿಯಾ ಕ್ರೀಡಾಕೂಟ : ಕರ್ನಾಟಕಕ್ಕೆ 3ನೇ ಸ್ಥಾನ.!14-6-2022


ಹರಿಯಾಣದಲ್ಲಿ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕ 3ನೇ ಸ್ಥಾನ ಪಡೆಯಿತು. 22 ಚಿನ್ನ, 17 ಬೆಳ್ಳಿ, 28 ಕಂಚು ಸೇರಿದಂತೆ ಒಟ್ಟು 67 ಪದಕಗಳನ್ನು ರಾಜ್ಯದ ಕ್ರೀಡಾಪಟುಗಳು ಗೆದ್ದಿದ್ದಾರೆ.




ಈಜು, ಕುಸ್ತಿ, ಕಬ್ಬಡ್ಡಿ, ಖೋ ಖೋ, ಬ್ಯಾಡ್ಮಿಂಟನ್​, ಟ್ರ್ಯಾಕ್​ ರನ್ನಿಂಗ್​ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಕರ್ನಾಟಕದ ಆಟಗಾರರು ಪಾರಮ್ಯ ಮೆರೆದಿದ್ದಾರೆ. ರಾಜ್ಯದ ಖ್ಯಾತ ಕ್ರೀಡೆಯಾದ ಮಲ್ಲಗಂಬದಲ್ಲಿ ತಂಡ ಚಿನ್ನದ ಸಾಧನೆ ಮಾಡಿದೆ.

ಕರ್ನಾಟಕ ತಂಡದಲ್ಲಿ 84 ಪುರುಷರು, 110 ಮಹಿಳೆಯರು ಸೇರಿ 194 ಕ್ರೀಡಾಪಟುಗಳು ಭಾಗವಹಿಸಿದ್ದರು.



ಹರಿಯಾಣ ಪ್ರಥಮ ಸಾಧನೆ: ಹರಿಯಾಣ ಕ್ರೀಡಾಪಟುಗಳು 137 ಪದಕ ಸಾಧನೆ ಮಾಡಿದ್ದು, ಇದರಲ್ಲಿ 52 ಚಿನ್ನ, 39 ಬೆಳ್ಳಿ, 46 ಕಂಚಿನ ಪದಕಗಳು ಸೇರಿವೆ. ಈ ಮೂಲಕ ಕ್ರೀಡಾಕೂಟದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಮಹಾರಾಷ್ಟ್ರ 125 ಪದಕಗಳ ಸಮೇತ 2ನೇ ಸ್ಥಾನ ಪಡೆದಿದ್ದು, 45+40+40 ಸಾಧನೆ ಮಾಡಿದೆ.




0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo