Slider

ಹಿಜಾಬ್ ವಿವಾದದ ವರದಿಗೆ ತೆರಳಿದ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನ2-6-2022

 


ಪುತ್ತೂರು : ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾರಕಕ್ಕೇರಿರುವ ಹಿಜಾಬ್ ಹಾಗೂ ಕೇಸರಿ ವಿವಾದದ ಘಟನೆಯನ್ನು ವರದಿ ಮಾಡಲು ಹೋದ ಮಾಧ್ಯಮದವರ ಮೇಲೆ ಕೆಲ ವಿದ್ಯಾರ್ಥಿಗಳು ಹಲ್ಲೆಗೆ ಮುಂದಾದ ಘಟನೆ ನಡೆದಿದೆ.



ಹಿಜಾಬ್ ಕುರಿತಾಗಿ ಮೃದು ಧೋರಣೆ ತೋರಿಸಲಾಗುತ್ತಿದೆ ಎಂದು ಆರೋಪಿಸಿ ಒಂದು ಗುಂಪಿನ ಪರವಾದ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದು, ಅವರು ಕಾಲೇಜು ವರಾಂಡದಲ್ಲಿ ಗುಂಪಾಗಿ ನಿಂತಿದ್ದರು. ಆಗ ಹಿಜಾಬ್ ಪರವಾದ ಗುಂಪೆÇಂದು ಅಲ್ಲೇ ಜಮಾಯಿಸಿತ್ತು. 



ಈ ಬಗ್ಗೆ ಸುದ್ದಿ ತಿಳಿದ ಮಾಧ್ಯಮದವರು ಕಾಲೇಜಿಗೆ ಹೋಗಿದ್ದು, ಹಿಜಾಬ್ ಪರ ಇರುವ ವಿದ್ಯಾರ್ಥಿಗಳ ಗುಂಪು ಏಕಾಏಕಿ ಮಾಧ್ಯಮದವರ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೆ ವರದಿಗಾಗಿ ತೆಗೆಯಲಾಗಿದ್ದ ವಿಡಿಯೋವನ್ನು ಕಾಲೇಜಿನ ಕಚೇರಿಯ ಕೊಠಡಿಯಲ್ಲಿ ಮಾಧ್ಯಮದವರನ್ನು ಕೂಡಿಹಾಕಿ ಒತ್ತಾಯ ಪೂರ್ವಕವಾಗಿ ವಿಡಿಯೋ ಡಿಲೀಟ್ ಮಾಡಿ, ಬೆದರಿಕೆಯನ್ನು ಹಾಕಿದರು.ಈ ಘಟನೆ ಬಗ್ಗೆ ಪೆÇಲೀಸರಿಗೆ ತಕ್ಷಣ ಮಾಹಿತಿ ನೀಡಿದರೂ ಅಲ್ಲೇ ಇದ್ದ ಪೋಲಿಸರು ಸ್ಥಳಕ್ಕೆ ತೆರಳದೇ ಮೌನವಾಗಿದ್ದರು ಎಂದು ಆರೋಪ ವ್ಯಕ್ತವಾಗಿದೆ.




0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo