Slider


ಮುಂಬೈನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯೋರ್ವರ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

ಕುಂದಾಪುರ: ಮುಂಬೈನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯೋರ್ವರ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಆರೋಪಿಗಳನ್ನು ಬೈಂದೂರು ಪೋಲಿಸರ ತಂಡ ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಗಳನ್ನು ಮಧ್ಯಪ್ರದೇಶ ಧರ್ಮಪುರಿ ನಿವಾಸಿಗಳಾದ ಆಲಿಖಾನ್ (31), ಅವದ್ ಖಾನ್ (33), ಇಕ್ರಾದನ್ (30) ಮತ್ತು ಗೋಪಾಲ್ ಅಮಾದಾರ್ (35) ಎಂದು ಗುರುತಿಸಲಾಗಿದೆ.

ಮಹಾರಾಷ್ಟ್ರ ನಿವಾಸಿ ಈಶ್ವರ್ ದಲಿಚಂದ್ ಪೊರ್ವಾಲ್ (48) ಎಂಬವರು 10 ವರ್ಷಗಳಿಂದ ಮುಂಬೈಯಲ್ಲಿ ಚಿನ್ನ ಖರೀದಿಸಿ ಮಂಗಳೂರು ಮತ್ತು ಹೈದರಾಬಾದ್ ಕಡೆಗಳಲ್ಲಿ ಸೇಲ್ಸ್ ಮಾಡುವ ವ್ಯವಹಾರ ಮಾಡಿಕೊಂಡಿರುತ್ತಾರೆ. ಈಶ್ವರ್ ದಲಿಚಂದ್ ಪೊರ್ವಾಲ್ ರವರು ಈ ಹಿಂದೆ ಮುಂಬೈನ ಜವೇರಿ ಬಜಾರ್ ಎಂಬಲ್ಲಿರುವ ಅರಿಹನ್ ಡೈಮಂಡ್ ಆರ್ಟ ಜ್ಯುವೆಲ್ಲರಿ ಹಾಗೂ ಇನ್ನಿತರ ಜ್ಯುವೆಲ್ಲರಿ ಅಂಗಡಿಗಳಿಂದ 466.960 ಗ್ರಾಂ ತೂಕದ ಒಟ್ಟು 18 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಖರೀದಿಸಿ, ಈಶ್ವರ್ ದಲಿಚಂದ್ ಪೊರ್ವಾಲ್ ರವರು ಸದ್ರಿ ಚಿನ್ನಾಭರಣಗಳನ್ನು ಸ್ಟೀಲ್ ಬಾಕ್ಸಿನಲ್ಲಿರಿಸಿ ಸೂಟ್ ಕೇಸ್ ನಲ್ಲಿ ಭದ್ರಪಡಿಸಿ ಇಟ್ಟುಕೊಂಡಿದ್ದು ಜೂನ್ 14 ರಂದು ಮಹಾರಾಷ್ಟ್ರದಿಂದ ಮಂಗಳೂರಿಗೆ ಕೆನರಾ ಪಿಂಟೋ ಬಸ್ ನ್ನು ಬುಕ್ ಮಾಡಿ ಜೂನ್ 15ರಂದು ಮಧ್ಯಾಹ್ನ 3:30 ಗಂಟೆಗೆ ಮೀರಾ ರೋಡಿನ ಶೀತಲ ನಗರದಿಂದ ಮಂಗಳೂರಿಗೆ ಚಿನ್ನಾಭರಣ ಇರುವ ಸೂಟ್ ಕೇಸ್ ನೊಂದಿಗೆ KA-70 1458 ನೇ ಕೆನರಾ ಪಿಂಟೋ ಬಸ್ ನ ಸೀಟ್ ನಂಬ್ರ 27 W ರಲ್ಲಿ ಕುಳಿತುಕೊಂಡು ಚಿನ್ನಾಭರಣ ಇರುವ ಸೂಟ್ ಕೇಸನ್ನು ಸೀಟಿನ ಅಡಿಭಾಗದಲ್ಲಿ ಇರಿಸಿ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು.

ಜೂನ್ 16ರಂದು ಬೆಳಿಗ್ಗೆ 7.15 ರ ಸುಮಾರಿಗೆ ಶಿರೂರು ಗ್ರಾಮದ ನಿರ್ಗದ್ದೆಯ ಶಿವ ಸಾಗರ ಹೊಟೇಲ್ ಎದುರು ಚಾಲಕನು ಬಸ್ಸನ್ನು ಉಪಹಾರಕ್ಕಾಗಿ ನಿಲ್ಲಿಸಿದ್ದು ಈಶ್ವರ್ ದಲಿಚಂದ್ ಪೊರ್ವಾಲ್ ರವರು ಹೊಟೇಲ್ ನಲ್ಲಿ ತಿಂಡಿ ತಿನ್ನುತ್ತಿದ್ದಾಗ ಬಸ್ ನ ಕ್ಲಿನರ್ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಬಸ್ಸಿನ ಒಳಗೆ ಪ್ರವೇಶಿಸಿ ಬ್ಯಾಗನ್ನು ಪರಿಶೀಲಿಸಿ ಬಸ್ಸಿನಿಂದ ಇಳಿದು ಹೊಟೇಲಿನಿಂದ ಸುಮಾರು ದೂರದಲ್ಲಿ ನಿಲ್ಲಿಸಿದ KA-03 N J-5060 ನೇ ನಂಬ್ರದ ಬ್ರೀಜಾ ಬಿಳಿ ಬಣ್ಣದ ಕಾರಿನಲ್ಲಿ ಪರಾರಿಯಾಗಿರುವುದಾಗಿ ಪ್ರಯಾಣಿಕರಲ್ಲಿ ತಿಳಿಸಿದಾಗ ಈಶ್ವರ್ ದಲಿಚಂದ್ ಪೊರ್ವಾಲ್ ರವರು ಕೂಡಲೇ ಬಸ್ಸಿನ ಒಳಗೆ ಹೋಗಿ ತಾನು ಕುಳಿತಿದ್ದ ಸೀಟಿನ ಅಡಿಯಲ್ಲಿ ಪರಿಶೀಲಿಸಿದಾಗ ಬ್ಯಾಗ್ ಇಲ್ಲದೇ ಇದ್ದು ಬಸ್ಸಿನ ಹಿಂಭಾಗಕ್ಕೆ ಹೋಗಿ ನೋಡಿದಾಗ ಸೂಟ್ ಕೇಸ್ ಬೀಗ ಒಡೆದ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು ಅದರೊಳಗಿದ್ದ ಸ್ಟೀಲ್ ಬಾಕ್ಸ್ ತೆರೆದಿದ್ದು ಬಾಕ್ಸ್ ನೊಳಗಿದ್ದ ಹಲವು ಬಗೆಯ ಡಿಸೈನ್ ಗಳುಳ್ಳ ಮೂಗಿಗೆ ಮತ್ತು ಕಿವಿಗೆ ಹಾಕುವ 466.960 ಗ್ರಾಂ ತೂಕದ ಒಟ್ಟು 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜಿಲ್ಲಾ ಎಸ್ಪಿ ಎನ್ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಎಸ್ ಟಿ ಸಿದ್ದಲಿಂಗಪ್ಪ ಹಾಗೂ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ ಸೂಚನೆಯಂತೆ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ತನಿಖೆಯನ್ನು ಕೈಗೊಂಡು ಮೇಲಿನ ನಾಲ್ವರು ಆರೋಪಿಗಳನ್ನು ಜೂನ್ 19 ರಂದು ಮಹಾರಾಷ್್ಟ್ರದ ದುಲೆ ಜಿಲ್ಲೆಯ ಸೋನ್ ಗಿರ್ ಟೋಲ್ ಗೇಟ್ ನಲ್ಲಿ ಗಂಗೊಳ್ಳಿ ಠಾಣಾಧಿಕಾರಿ ವಿನಯ್ ಎಂ ಕೊರ್ಲಹಳ್ಳಿ ಮತ್ತು ಅಪರಾಧ ವಿಭಾಗದ ಸಿಬಂದಿಯವರಾದ ಮೋಹನ ಪೂಜಾರಿ, ನಾಗೇಂದ್ರ, ಶ್ರೀಧರ್ ಅವರು ವಶಕ್ಕೆ ಪಡೆದು ಆರೋಪಿಗಳಿಂದ 457 ಗ್ರಾಂ ಚಿನ್ನಒಟ್ಟು ಮೌಲ್ ರೂ 18 ಲಕ್ಷ ಹಾಗೂ ಬ್ರೀಜಾ ಕಾರು ಅಂದಾಜು ಮೌಲ್ಯ ರೂ 8 ಲಕ್ಷ ಹಾಗೂ ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದ ಆರೋಪಿ ಪತ್ತೆ, ಕಾರ್ಯಚರಣೆಯ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎನ್ ವಿಷ್ಣುವರ್ಧನರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ ಸಿದ್ದಲಿಂಗಪ್ಪ ಉಡುಪಿ ಹಾಗೂ ಡಿವೈಎಸ್ಪಿ ಕುಂದಾಪುರ ಶ್ರೀಕಾಂತ್ ಕೆ ಇವರ ಸೂಚನೆಯಂತೆ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರಾದ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಠಾಣಾಧಿಕಾರಿ ವಿನಯ್ ಎಂ ಕೊರ್ಲಹಳ್ಳಿ, ಬೈಂದೂರು ಠಾಣಾಧಿಕಾರಿ ಪವನ್ ನಾಯಕ್, ಅಪರಾಧ ವಿಭಾಗದ ಸಿಬಂದಿಯವರಾದ ಮೋಹನ ಪೂಜಾರಿ, ನಾಗೇಂದ್ರ, ಕೃಷ್ಣ ದೇವಾಡಿಗ, ಶ್ರೀಧರ್, ಸುಜಿತ್, ಪ್ರಿನ್ಸ್, ಶ್ರೀನಿವಾಸ, ರಾಘವೇಂದ್ರ, ನಾಗೇಶ್ ಗೌಡ ಸಹಕರಿಸಿದ್ದರು.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo