ಹೊಸದಿಲ್ಲಿ :- ಉತ್ತರ ಪ್ರದೇಶ ಸರಕಾರದ ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ನೀಡಲು ಸಾಧ್ಯವಿಲ್ಲ, ಆದರೆ ಎಲ್ಲ ನಿಯಮಾವಳಿ ಪಾಲಿಸುವಂತೆ ಸೂಚಿಸಬಹುದಾಗಿದೆ ಎಂದು ಸುಪ್ರಿಂ ಕೋರ್ಟ್ ಹೇಳಿದೆ. ತಡೆ ನೀಡಲು ಸಾಧ್ಯವಿಲ್ಲ, ಅದರೆ ದಂಗೆಯಲ್ಲಿ ಭಾಗವಹಿಸಿದ ಆರೋಪಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಹಾಗೂ ಮನವಿದಾರರಿಗೆ ಉತ್ತರ ನೀಡಬೇಕೆಂದು ಸರಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ. ಉತ್ತರ ಪ್ರದೇಶದ ಕಾನ್ಪುರ ಹಾಗೂ ಪ್ರಯಾಗ್ ರಾಜ್ ದಲ್ಲಿ ನಡೆದ ದಂಗೆ ಹಾಗೂ ಹಿಂಸಾಚಾರದ ಮಾಸ್ಟರ್ ಮೈಂಡ್ ಜಾವೇದ್ ಮೊಹಮ್ಮದ್ ಸೇರಿದಂತೆ ಇನ್ನುಳಿದವರ ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯಾಚರಣೆನ್ನು ಸಿ.ಎಂ ಯೋಗಿ ಆದಿತ್ಯನಾಥ ಸರಕಾರ ನಡೆಸಿದೆ.
ಹಿಂಸಾಚಾರಕ್ಕೆ ಪ್ರಚೋಚನೆ ನೀಡಿದವರ ಸುಮಾರು ಐವತ್ತಕ್ಕೂ ಹೆಚ್ಚು ಅಕ್ರಮ ಕಟ್ಟಡಗಳು ಈಗಾಗಲೇ ನೆಲಸಮವಾಗಿವೆ.
ಯೋಗಿ ಸರಕಾರ ನಡೆಸುತ್ತಿರುವ ಬುಲ್ಡೋಜರ್ ಕಾರ್ಯಾಚರಣೆ ಕಾನೂನಿಗೆ ವಿರುದ್ಧವಾಗಿದೆ. ಇದಕ್ಕೆ ತಡೆಯಾಜ್ಞೆ ನೀಡಬೇಕೆಂದು ಜಮಾತ್ ಉಲ್ಮಾ ಎಂಬ ಸಂಘಟನೆ ಸುಪ್ರಿಂ ಕೋರ್ಟ ಮೊರೆಹೋಗಿತ್ತು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ