ಉಡುಪಿ: ಕಡಿಯಾಳಿ ಮಹಿಷ ಮರ್ದಿನಿ ದೇವಾಲಯಕ್ಕೆ ಕೇಂದ್ರ ರೈತರ ಕಲ್ಯಾಣ ಮತ್ತು ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.
ದೇಗುಲದ ಕಾಮಗಾರಿ ವೀಕ್ಷಿಸಿದ ಸಚಿವೆ ದೇಗುಲದ ಶಿಲ್ಪಕಲೆ, ತಿರುಗುವ ಮುಚ್ಚಿಗೆ, ಕಾಷ್ಟಶಿಲ್ಪವನ್ನು ಮೆಚ್ಚಿಕೊಂಡರು.ಕರಸೇವಕರ ಮೂಲಕ ದೇಗುಲದ ತಳಪಾಯ ನಿರ್ಮಾಣ ಮಾದರಿ. ಭವ್ಯ ದೇಗುಲವನ್ನು ಗ್ರಾಮಸ್ಥರು ಮತ್ತು ಭಕ್ತರು ಸೇರಿ ದೇವರಿಗೆ ಸಮರ್ಪಿಸಿರುವುದು ಶ್ಲಾಘನೀಯ. ಕರಸೇವೆಯಲ್ಲಿ ಸ್ವಯಂಸೇವಕಿಯಾಗಿ ಭಾಗವಹಿಸಿದ್ದು ಭಾಗ್ಯ ಎಂದು ಸ್ಮರಿಸಿದರು.
'ದೇವ ಸೇವೆ, ಸಮಾಜ ಸೇವೆ' ಎಂಬ ವಿಶಿಷ್ಟ ಪರಿಕಲ್ಪನೆಯೊಂದಿಗೆ ಪ್ರಚಾರಕ್ಕೆ ಬಳಸಿದ ಕೊಡೆಗಳನ್ನು ಉಡುಪಿ ನಿವಾಸಿ ಶರ್ವಾಣಿಗೆ ಹಸ್ತಾಂತರಿಸಲಾಯಿತು.
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ, ದೇವಳದ ಪ್ರಧಾನ ಅರ್ಚಕ ಕೆ.ರಾಧಾಕೃಷ್ಣ ಉಪಾಧ್ಯಾಯ, ವ್ಯವಸ್ಥಾಪನ ಮಂಡಳಿಯ ಸದಸ್ಯೆ ಸಂಧ್ಯಾ ಪ್ರಭು, ಶಶಿಕಲಾ ಭರತ್, ಮಂಜುನಾಥ್ ಹೆಬ್ಬಾರ್, ಸಂಧ್ಯಾ ರಮೇಶ್, ನಗರಸಭಾ ಸದಸ್ಯೆ ಗೀತಾ ಶೇಟ್, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಸುಜಾತಾ ಸತೀಶ್, ಚೇತನಾ ಚಂದ್ರಶೇಖರ್ ಪ್ರಭು, ಪ್ರದೀಪ್ ರಾವ್, ದೇವಸ್ಥಾನದ ಅಧಿಕಾರಿ ಗಂಗಾಧರ ಹೆಗ್ಡೆ ಇದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ