ಉಡುಪಿ : ಕರ್ಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅನಧಿಕೃತ ಧ್ವನಿವರ್ಧಕ ಬಳಕೆ ಆರೋಪ ಹಾಗೂ ಮಿತಿ ಮೀರಿದ ಶಬ್ದದ ವಿರುದ್ಧ ಕರ್ಜೆಯ ಶ್ರೀಕಾಂತ್ ಅಡಿಗ ಎಂಬವರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜೂ.11ರಂದು ದೂರು ನೀಡಿದ್ದಾರೆ.
ಯಾವುದೇ ಅನುಮತಿ ಇಲ್ಲದೆ ರಾಜ್ಯ ಸರಕಾರ ಹೊರಡಿಸಿದ ಸುತ್ತೋಲೆಯನ್ನು ಧಿಕ್ಕರಿಸಿ ದಿನನಿತ್ಯ ಬೆಳಗ್ಗೆ 7 ಗಂಟೆಯಿಂದ ಅಪರಾಹ್ನ 12ಗಂಟೆ ಯವರೆಗೆ ಮತ್ತು ಸಂಜೆ 5ಗಂಟೆಯಿಂದ 7ಗಂಟೆಯವರೆಗೆ 100 ಡೆಸಿಬಲ್‌ಗೂ ಅಧಿಕ ಧ್ವನಿಯಲ್ಲಿ ಧ್ವನಿವರ್ಧಕವನ್ನು ಉಪಯೋಗಿಸಲಾಗುತ್ತಿದೆ ಎಂದು ದೂರಿ ನಲ್ಲಿ ತಿಳಿಸಲಾಗಿದೆ.
ಇದರಿಂದ ಸುತ್ತಮುತ್ತಲಿನ 100 ಮೀಟರ್ ಪ್ರದೇಶದಲ್ಲಿ ದೈನಂದಿನ ಚಟು ವಟಿಕೆಗಳಿಗೆ ಭಂಗ ಉಂಟಾಗುತ್ತಿದೆ. ಆದುದರಿಂದ ಈ ಅನಧಿಕೃತ ಧ್ವನಿ ವರ್ಧಕ ವನ್ನು ತೆರವುಗೊಳಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ದೂರಿನಲ್ಲಿ ಎಸ್ಪಿಯವರನ್ನು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ