ಉಡುಪಿ: ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರವಾಗಿ ಕೊಲೆ ಬೆದರಿಕೆ ಬರುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ಮುಖಂಡ ಹಾಗೂ ಉಡುಪಿ ಸರಕಾರಿ ಮಹಿಳಾ ಪಿಯು ಕಾಲೇಜು ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಅವರಿಗೆ ಜಿಲ್ಲಾ ಪೊಲೀಸ್ ಇಲಾಖೆ ಗನ್ ಮ್ಯಾನ್ ಭದ್ರತೆಯನ್ನು ಒದಗಿಸಿದೆ.
ನಿರಂತರವಾಗಿ ಕೊಲೆ ಬೆದರಿಕೆ ಬರುತ್ತಿರುವ ಹಿನ್ನಲೆಯಲ್ಲಿ ಇಲಾಖೆ ನೀಡಿರುವ ಗನ್ ಮ್ಯಾನ್ ಭದ್ರತೆಯನ್ನು ಪಡೆದುಕೊಳ್ಳುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರು ಯಶ್ಪಾಲ್ ಅವರಿಗೆ ಸಲಹೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯಶ್ಪಾಲ್ ಸುವರ್ಣ ಅವರು ಪೊಲೀಸ್ ಇಲಾಖೆ ಗುರುವಾರ ಗನ್ ಮ್ಯಾನ್ ಕಳುಹಿಸಿಕೊಟ್ಟಿದ್ದು, ನಾನು ಗನ್ ಮ್ಯಾನ್ ಸಂಸ್ಕೃತಿಯಲ್ಲಿ ಬೆಳೆದವನಲ್ಲ. ಉಡುಪಿಯಲ್ಲಿ ಓಡಾಡುವಾಗ ಗನ್ ಮ್ಯಾನ್ ಬೇಡ ಎಂದಿದ್ದೇನೆ ಆದರೂ ಈ ಬಗ್ಗೆ ಪಕ್ಷದ ಹಿರಿಯರ ಅಭಿಪ್ರಾಯ ಪಡೆಯುತ್ತೇನೆ. ಪೊಲೀಸ್ ಇಲಾಖೆ ಗನ್ ಮ್ಯಾನ್ ಪಡೆಯಲೇ ಬೇಕು ಎಂದು ಹೇಳಿದ್ದು ಇಲಾಖೆ ತನ್ನ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ನಮಗೆಲ್ಲಾ ಭದ್ರತೆ ನೀಡುತ್ತಾ ಹೋದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದರು.
ಮಾರಿಗುಡಿ-6 ಎಂಬ ಇನ್ಟಾಗ್ರಾಂ ಪೇಜ್ ನಲ್ಲಿ ಎರಡನೇ ಬಾರಿ ತನಗೆ ಕೊಲೆ ಬೆದರಿಕೆ ಹಾಕಿ ಪೋಸ್ಟ್ ಹಾಕಿದ್ದು ಶೃದ್ಧಾಂಜಲಿ ಬ್ಯಾನರ್ ರೆಡಿ ಮಾಡಲು ಹೇಳಿದ್ದಾರೆ ಆದರೆ ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ಬೆದರಿಕೆ ಹಾಕುವವರ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಬೆದರಿಕೆ ಹಾಕಿದರವು ಸರಿಯಾದ ದಾರಿಯಲ್ಲಿ ಬದುಕಲು ಕಲಿಯಿರಿ ಅಡ್ಡದಾರಿ ಹಿಡಿದರೆ ಇಲಾಖೆ, ನಮ್ಮ ಕಾರ್ಯಕರ್ತರು ಪಾಠ ಕಲಿಸುತ್ತಾರೆ. ಸ್ಥಳೀಯರು ಯಾರೋ ಹೊರದೇಶದವರ ಮೂಲಕ ಬೆದರಿಕೆ ಹಾಕಿಸುತ್ತಿದ್ದಾರೆ ಸ್ಥಳೀಯ ಭಾಷೆಯನ್ನು ಕಾಮೆಂಟ್ನಲ್ಲಿ ಬಳಸುತ್ತಿದ್ದಾರೆ ಇವರುಗಳು ಮೂಳೂರು, ಉಚ್ಚಿಲ ಭಾಗದವರು ಎಂಬ ಮಾಹಿತಿ ಇದ್ದು ಇಲಾಖೆ ಸೂಕ್ತ ತನಿಖೆ ನಡೆಸಬೇಕು ಎಂದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ