ಮುಲ್ಕಿ: ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಹಿರಿಯ ಪುರೋಹಿತ ವಿದ್ವಾಂಸರಾದ ಸಾಧಕ ಪಿ .ಅನಂತ ಭಟ್ ಬಳ್ಕುಂಜೆ ರವರ ಮನೆಗೆ ಭೇಟಿ ನೀಡಿ ಅವರನ್ನು ತಮ್ಮ ಆಶ್ರಮದ ವತಿಯಿಂದ ಗೌರವಿಸಿದರು.
ಈ ಸಂದರ್ಭ ಅವರು ಮಾತನಾಡಿ ಕಲಿಯುಗದಲ್ಲಿ ಯಜ್ಞಯಾಗಾದಿಗಳ ಮುಖೇನ ದೇವರನ್ನು ಒಲಿಸಲು ಸುಲಭವಾದ ಮಾರ್ಗವಾಗಿದ್ದು ಲೌಕಿಕ ಪ್ರಪಂಚದಲ್ಲಿ ಇಂತಹ ಕ್ರಿಯಾಕರ್ಮಗಳನ್ನು ನಡೆಸಿ ಪಿ. ಅನಂತ ಭಟ್ ರವರು ಉತ್ತಮ ಧಾರ್ಮಿಕತೆಯ ಮೂಲಕ ಕಾರ್ಯವೈಖರಿ ಶ್ಲಾಘನೀಯ ಎಂದರು.
ಈ ಸಂದರ್ಭ ಕುಸುಮ ಅನಂತ್ ಭಟ್, ಮುಲ್ಕಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ರಾಹುಲ್ ಸಿ ಭಟ್, ಕವತ್ತಾರು ಶ್ರೀ ಅಬ್ಬಗ-ದಾರಗ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ವೇ. ಮೂ. ವಿಷ್ಣು ರಾಜ್ ಭಟ್, ರಾಧಿಕಾ ವಿ ಭಟ್, ಬಾಲಕೃಷ್ಣ ರಾವ್, ಆಶ್ರಮದ ಸಂಚಾಲಕ ಪುನೀತ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ