Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ:-ಹಿರಿಯ ನಾಯಕ ಬ್ರಿಜೇಶ್ ಕಾಳಪ್ಪ ಗುಡ್‌ಬೈ1-6-2022

 


ಬೆಂಗಳೂರು: ಕಾಂಗ್ರೆಸ್‌ ನಾಯಕ, ಸುಪ್ರೀಂ ಕೋರ್ಟ್‌ ವಕೀಲ ಬ್ರಿಜೇಶ್‌ ಕಾಳಪ್ಪ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.


ಕೆಪಿಸಿಸಿ ವಕ್ತಾರರಾಗಿದ್ದ ಬ್ರಿಜೇಶ್‌ ಕಾಳಪ್ಪ ಅವರು ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವಕಾಶ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.



ಈ ಕುರಿತಂತೆ ತಮ್ಮ ಫೇಸ್​​ಬುಕ್​​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಬ್ರಿಜೇಶ್​ ಕಾಳಪ್ಪ ಅವರು 1997ರಲ್ಲಿ ಆರಂಭವಾದ ಕಾಂಗ್ರೆಸ್​​ನೊಂದಿಗಿನ ಒಡನಾಟಕ್ಕೆ ಫುಲ್​​​ಸ್ಟಾಪ್​ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಪತ್ರ ರವಾನಿಸಿರುವ ಬ್ರಿಜೇಶ್ ಕಾಳಪ್ಪ ಅವರು, ಪಕ್ಷದಲ್ಲಿ ಇಷ್ಟು ವರ್ಷ ನಾನಾ ಜವಾಬ್ದಾರಿ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ.




ಇದೇ ವೇಳೆ ತಮ್ಮನ್ನು ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರನಾಗಿ ಸಚಿವ ಸ್ಥಾನದೊಂದಿಗೆ ನೇಮಕಗೊಂಡಿದಕ್ಕೆ ಧನ್ಯವಾದ, ಈ ಹಿನ್ನೆಲೆಯಲ್ಲಿ 1997ರಲ್ಲಿ ಆರಂಭವಾದ ಒಡನಾಟ ಕೊನೆಗೊಳಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ 2013ರ ಯುಪಿಎ ಸರ್ಕಾರದ ಅವಧಿಯಿಂದ ಇದುವರೆಗೂ ಸುಮಾರು 6,497 ಚರ್ಚೆಗಳಲ್ಲಿ ಹಿಂದಿ, ಇಂಗ್ಲೀಷ್​ ಮತ್ತು ಕನ್ನಡ ಚಾನೆಲ್​​ಗಳಲ್ಲಿ ಪಕ್ಷವನ್ನು ಪ್ರತಿನಿಧಿಸಿದ್ದೇನೆ. ಅಲ್ಲದೇ ಪಕ್ಷ ತಮಗೆ ವಹಿಸಿಕೊಟ್ಟಿದ್ದ ರಾಜಕೀಯ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ಇದೆ ಅಂತ ಧನ್ಯವಾದ ತಿಳಿಸಿದ್ದಾರೆ.


2014 ಮತ್ತು 2019ರ ಸೋಲಿನ ಬಳಿಕ ಪಕ್ಷಕ್ಕೆ ಕೆಟ್ಟ ಸಮಯ ಬಂದರೂ ನಾನು ಉತ್ಸಾಹವನ್ನು ಕಳೆದುಕೊಂಡಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನಾನು ಉತ್ಸಾಹ ಕಳೆದುಕೊಂಡಿದ್ದೇನೆ. ಹೀಗಾಗಿ 1997 ರಿಂದ ಆರಂಭವಾದ ಪಕ್ಷ ನಂಟಿಗೆ ಕೊನೆ ಹೇಳುತ್ತಿದ್ದು, ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬರೆದಿದ್ದಾರೆ.



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo