ಮಂಗಳೂರು: ಕೋವಿಡ್‌ನಿಂದಾಗಿ ರದ್ದಾಗಿದ್ದ ಮಂಗಳೂರು-ದೆಹಲಿ ನೇರ ವಿಮಾನ ಸಂಚಾರ ಜುಲೈ 1 ರಿಂದ ಮತ್ತೆ ಆರಂಭವಾಗಲಿದೆ.
ಇಂಡಿಗೋ ವಾಯುಯಾನ ಕಂಪನಿಯ ತಡೆರಹಿತ ವಿಮಾನವು, ವಾರಕ್ಕೆ ನಾಲ್ಕು ದಿನ ಸಂಚರಿಸಲಿದ್ದು, ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರದಂದು ವಿಮಾನಗಳು ಲಭ್ಯವಿರುತ್ತವೆ.
ಕೋವಿಡ್‌ನಿಂದಾಗಿ ನೇರ ವಿಮಾನ ರದ್ದಾದ ಬಳಿಕ ಪ್ರಯಾಣಿಕರು ಬೆಂಗಳೂರು, ಚೆನ್ನೈ, ಪುಣೆ ಮುಂಖಾಂತರ ದೆಹಲಿಗೆ ತೆರಳಬೇಕಿತ್ತು. ಇದು ಪ್ರಯಾಣಿಸಲು ಅಧಿಕ ಪ್ರಮಾಣದ ವೆಚ್ಚ ತಗಲುತ್ತಿತ್ತು. ಇದೀಗ ಮತ್ತೆ ನೇರ ವಿಮಾನ ಸಂಚಾರ ಆರಂಭವಾಗುವುದರಿಂದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ