Slider


ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ 06-06-2022

ಮುಲ್ಕಿ: ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. 
ಬಳಿಕ ಸಭಾಭವನದಲ್ಲಿ ನಡೆದ ಚಿ.ಸೌ. ಐಶ್ವರ್ಯ - ಚಿ. ಸುದರ್ಶನ್ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನೂತನ ವಧು ವರರನ್ನು ಆಶೀರ್ವದಿಸಿದರು.
ಈ ಸಂದರ್ಭ ಮಾತೃಶ್ರೀ ಶಾರದಮ್ಮ, ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ರಾಹುಲ್ ಸಿ ಭಟ್, ಸಂಚಾಲಕರಾದ ಗುರುಪ್ರಸಾದ್ ಭಟ್ ಮುಂಡ್ಕೂರು, ಪುನೀತ್ ಕೃಷ್ಣ ,ಮತ್ತಿತರರು ಉಪಸ್ಥಿತರಿದ್ದರು. ಸುಬ್ರಮಣ್ಯ ಭಟ್ ಚೇಳಾಯರು ಸ್ವಾಗತಿಸಿ ನಿರೂಪಿಸಿದರು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo