Slider


*ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಗುಡ್‌ ನ್ಯೂಸ್‌; ಬ್ಯಾಂಕಿಂಗ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ IBPS* 28-5-2022



ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆಲಸಮಾಡಬೇಕು ಎಂದು ಕನಸು ಕಾಣುತ್ತಿರುವ ಹಲವು ಮಂದಿಗೆ ಇಲ್ಲಿದೆ ಶುಭಸುದ್ದಿ. ಇದೀಗ IBPS(Institute of Banking Personnel Selection) ತನ್ನಲ್ಲಿ ಖಾಲಿ ಇರುವ ರಿಸರ್ಚ್‌ ಅಸೋಸಿಯೇಟ್‌ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ ವೇತನ ಸುಮಾರು 12 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಈ ಸಂದರ್ಶನಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಲು ಮುಂಬೈನಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. IBPS ಹೊರಡಿಸಿರುವ ಪ್ರಕಟಣೆಯ ಪ್ರಕಾರ ತಿಂಗಳಿಗೆ 44,900( 12 ತಿಂಗಳಿಗೆ ಸಿಟಿಸಿ ಒಳಗೊಂಡಿರುವುದರಿಂದ ಸರಿಸುಮಾರು 12 ಲಕ್ಷ ) ವೇತನವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವವರು ಪ್ರಮುಖವಾಗಿ ಗಮನಿಸಲೇ ಬೇಕಾದ ಅಂಶ




ಇನ್ನು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೇ 31, 2022ರ ಒಳಗೆ ಅರ್ಜಿ ಸಲ್ಲಿಸಬೇಕಾಗಿದ್ದು, ಅರ್ಜಿ ಸಲ್ಲಿಸಲು ಎಲ್ಲಾ ಅಭ್ಯಾರ್ಥಿಗಳು ಒಂದು ಸಾವಿರ ರೂಪಾಯಿ ಪಾವತಿಸುವುದು ಕಡ್ಡಾಯವಾಗಿದೆ. ಇದೇ ಜೂನ್‌ರಂದು ಎಕ್ಸಾಮ್‌ಗಳು ನಡೆಯಲಿವೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 21 ಹಾಗು ಗರಿಷ್ಠ 30 ವರ್ಷ ವಯಸ್ಸಿನವರಾಗಿರಬೇಕು. ಈ ಅಭ್ಯರ್ಥಿಗಳು 2 ಮೇ 1995 ರಿಂದ 1 ಮೇ 2001ರ ಒಳಗೆ ಜನಿಸಿದವರಾಗಿರ ಬೇಕು.

*ಅರ್ಹತೆ*



ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೈಕೋಲಾಜಿ ವಿಭಾಗದಲ್ಲಿ ಸ್ನಾತಕೊತ್ತರ ಪದವಿ/ ಸೈಕೊಮೆಟ್ರಿಕ್ಸ್‌ ಮ್ಯಾನೆಜ್‌ಮೆಂಟ್‌ (HR ವಿಶೇಷತೆಯೊಂದಿಗೆ)/ ಸೈಕೋಲಾಜಿಕಲ್‌ ಮೆಷರ್‌ಮೆಂಟ್‌ನಲ್ಲಿ ಅರ್ಹ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದಿರುವುದು ಕಡ್ಡಾಯವಾಗಿದೆ. ಈ ಅಭ್ಯರ್ಥಿಗಳು ಶೈಕ್ಷಣಿಕ ವಿಶ್ಲೇಷಣೆ/ ಚೆಕ್‌ ಸುಧಾರಣೆಯಲ್ಲಿ 1 ವರ್ಷದ ಅನುಭವ ಹೊಂದಿರುವುದು ಹಾಗು ಕಂಪ್ಯೂಟರ್‌ ಜ್ಞಾನ ಹೊಂದುವುದು ಕಡ್ಡಾಯವಾಗಿದೆ.

ಆಯ್ಕೆ ಪ್ರಕ್ರಿಯೆ



ಆಯ್ಕೆ ಪ್ರಕ್ರಿಯೆಯು ಮೂರು ರೀತಿಯಲ್ಲಿ ನಡೆಯಲಿದ್ದು ಮೊದಲು ಅನ್‌ಲೈನ್‌ ಪರೀಕ್ಷೆಯನ್ನು ನಡೆಸಬೇಕಾಗುತ್ತದೆ. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನ ಎರಡನೇ ಹಂತವಾಗಿ ಗುಂಪು ಚಟುವಟಿಯ ಮೂಲಕ ಆಯ್ದುಕೊಳ್ಳಲಾಗುತ್ತದೆ. ಇನ್ನು ಕೊನೆಯ ಹಂತವಾಗಿ ಖಾಸಗಿ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo