ಮಂಗಳೂರು: ಕಾರ್ಯಕ್ರಮವೊಂದರಲ್ಲಿ ಶಾಸಕರಿಬ್ಬರು ದೀಪ ಬೆಳಗಿಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ತುಳು ಸಿನಿಮಾವೊಂದರ ಕಾರ್ಯಕ್ರಮ ಉದ್ಘಾಟನೆಯಲ್ಲಿ ಶಾಸಕ ಯು.ಟಿ. ಖಾದರ್ ಹಾಗೂ ಶಾಸಕ ವೇದವ್ಯಾಸ ಕಾಮತ್ ದೀಪ ಬೆಳಗಿಸುವ ಫೋಟೋ ಇದಾಗಿದೆ. ಇದರಲ್ಲಿ ಶಾಸಕ ಯು.ಟಿ. ಖಾದರ್, ಚಪ್ಪಲಿ ತೆಗೆದು ದೀಪ ಬೆಳಗಿಸಿದ್ದು, ಶಾಸಕ ವೇದವ್ಯಾಸ ಕಾಮತ್
ಚಪ್ಪಲಿ ಹಾಕಿಕೊಂಡು ದೀಪ ಬೆಳಗಿಸಿದ್ದಾರೆ.
ಸದ್ಯ ಶಾಸಕರಿಬ್ಬರು ದೀಪ ಬೆಳಗಿಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮುಸ್ಲಿಂ ಸಮುದಾಯದ ನಾಯಕ ಯು.ಟಿ. ಖಾದರ್ ಗೆ ಇರುವ ಜ್ಞಾನ, ಹಿಂದೂ ಸಮುದಾಯದ ವೇದವ್ಯಾಸ ಕಾಮತ್ ಗೆ ಇಲ್ಲವೆಂದು ಈ ಫೋಟೋ ಟ್ರೋಲ್ ಆಗುತ್ತಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ