ಪಂಜಾಬ್: ಸರ್ಕಾರಿ ಬಸ್ ನಲ್ಲಿ ಮಹಿಳೆಯೋರ್ವಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಪಂಜಾಬ್ ನ ಫಗ್ವಾರಾದಲ್ಲಿ ನಡೆದಿದೆ.
ಪಂಜಾಬ್ ನ ಲೂಧಿಯಾನ ನಿವಾಸಿ ಅಶ್ವಿರ್ ಎಂಬ ಮಹಿಳೆ ಸರ್ಕಾರಿ ಬಸ್ನಲ್ಲಿ ಜಲಂಧರ್ನಿಂದ ಲೂಧಿಯಾನಕ್ಕೆ ಬಸ್ ನಲ್ಲಿ ತೆರಳುತ್ತಿದ್ದ ವೇಳ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಬಸ್ ನಲ್ಲೇ ಹೆಣ್ಣು ಮಗುವಿನ ಜನ್ಮ ನೀಡಿದ್ದಾರೆ.
ಇನ್ನು ಮಹಿಳೆ ತೆರಳುತ್ತಿದ್ದ ಬಸ್ ನಲ್ಲಿ ಆರೋಗ್ಯ ಸಿಬ್ಬಂದಿಯೊಬ್ಬರು ಪ್ರಯಾಣಿಸುತ್ತಿದ್ದುದರಿಂದ ಗರ್ಭಿಣಿಗೆ ಸಹಾಯ ಮಾಡಿದ್ದಾರೆ. ಬಳಿಕ ತಾಯಿ, ಮಗುವನ್ನು ಫಗ್ವಾರ್ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ