ದಕ್ಷಿಣ ಕನ್ನಡ: ಜಿಲ್ಲೆಯ ಬಂಟ್ವಾಳದ ಮಂಚಿ ಗ್ರಾಮದಲ್ಲಿ ಕರ್ನಾಟಕದ ಮೊಟ್ಟ ಮೊದಲ ಕತ್ತೆ ಹಾಲಿನ ಡೈರಿಯನ್ನು ಶೀಘ್ರವೇ ಪ್ರಾರಂಭಿಸಲು ಶ್ರೀನಿವಾಸ ಗೌಡ ಎಂಬುವವರು ತೀರ್ಮಾನಿಸಿದ್ದಾರೆ.
ಕತ್ತೆ ಹಾಲಿನ ಡೈರಿ ಆರಂಭಿಸುವ ಮೂಲಕ ರಾಜ್ಯದ ರೈತರಿಗೆ ಕತ್ತೆ ಸಾಕಾಣಿಕೆಗೆ ಪ್ರೋತ್ಸಾಹ ನೀಡಿದಂತಾಗಿದೆ. ಕತ್ತೆ ಹಾಲಿನಲ್ಲಿ ಅಧಿಕ ಪೋಷಕಾಂಶಗಳಿದ್ದು ಕೊರೊನಾ ಸೋಂಕು ಬಂದ ನಂತರ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಾಗಿದೆ.
ಇನ್ನು ಪ್ರಸ್ತುತ ಒಂದು ಲೀಟರ್ ಕತ್ತೆ ಹಾಲಿಗೆ ಮಾರುಕಟ್ಟೆಯಲ್ಲಿ 5ರಿಂದ 10 ಸಾವಿರ ರೂಪಾಯಿ ಇದ್ದು, ಮುಂಬವರುವ ದಿನಗಳಲ್ಲಿ ಕತ್ತೆ ಹಾಲಿನ ಬೇಡಿಕೆಯನ್ನು ಗಮನದಲ್ಲಿರಿಸಿಕೊಂಡು ಕತ್ತೆ ಹಾಲಿನ ಡೈರಿ ಸ್ಥಾಪನೆ ಪ್ರಯೋಗಕ್ಕೆ ಶ್ರೀನಿವಾಸ ಗೌಡ ಅವರು ಮುಂದಾಗಿದ್ದಾರೆ.
ಕತ್ತೆ ಹಾಲಿಗಷ್ಟೇ ಅಲ್ಲದೆ ಕತ್ತೆ ಗೊಬ್ಬರಕ್ಕೂ ಅಧಿಕ ಬೆಲೆಯಿದ್ದು, ಒಂದು ಕೆಜಿ ಗೊಬ್ಬರಕ್ಕೆ 600ರಿಂದ 700 ರೂಪಾಯಿ ಇದೆ. ಈ ಮೂಲಕ ಕತ್ತೆ ಸಾಕುವ ರೈತರು ತಿಂಗಳಿಗೆ 30ರಿಂದ 40 ಸಾವಿರ ರೂಪಾಯಿ ಸಂಪಾದನೆ ಮಾಡಬಹುದಾಗಿದೆ. ಇನ್ನು ಕತ್ತೆ ಹಾಲು ಹಾಗೂ ಗೊಬ್ಬರ ಖರೀದಿಗೂ ಅವಕಾಶ ಕಲ್ಪಿಸಿಕೊಡುವುದು ಈ ಡೈರಿ ಸ್ಥಾಪನೆಯ ಮೂಲ ಉದ್ದೇಶವಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ