Slider


ಬೆಂಗಳೂರು: ಮಹಿಳೆಯ ಖಾಸಗಿ ಫೋಟೋ ಕಳವು ಮಾಡಿ ಬ್ಲಾಕ್ ಮೇಲ್; ಆರೋಪಿಯ ಬಂಧನ

ಬೆಂಗಳೂರು: ಮಹಿಳೆಯ ಖಾಸಗಿ ಫೋಟೋ ಕಳವು ಮಾಡಿ ಬ್ಲಾಕ್ ಮೇಲ್; ಆರೋಪಿಯ ಬಂಧನ
ಬೆಂಗಳೂರು: ಲ್ಯಾಪ್‌ಟಾಪ್‌ ರಿಪೇರಿ ವೇಳೆ ಮಹಿಳೆಯ ಖಾಸಗಿ ಫೋಟೋಗಳನ್ನು ಕಳವು ಮಾಡಿ ಬಳಿಕ ಆಕೆಗೆ ಬ್ಲಾಕ್​ಮೇಲ್ ಮಾಡಿದ ಆರೋಪಿಯನ್ನು ಬೆಂಗಳೂರಿನ ಬಾಗಲಗುಂಟೆ ಪೊಲೀಸರು​ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ದಾಸರಹಳ್ಳಿಯ ಮಹೇಶ್ವರಿ ನಗರದ ನಿವಾಸಿ ಪ್ರವೀಣ್​ ರಾವ್​ ಎಂದು ಗುರುತಿಸಲಾಗಿದೆ. ಮಹಿಳೆಯೋರ್ವಳು ತನ್ನ ಮನೆಗೆ ಆರೋಪಿಯನ್ನು ಲ್ಯಾಪ್ ಟಾಪ್ ರಿಪೇರಿ ಮಾಡಲು ಕರೆಸಿದ್ದಳು. ಈ ಸಂದರ್ಭ ಲ್ಯಾಪ್ ಟಾಪ್ ನಲ್ಲಿ ಇದ್ದ ಖಾಸಗಿ ಫೋಟೋಗಳನ್ನು ಆರೋಪಿ ಕದ್ದಿದ್ದಾನೆ. ಬಳಿಕ ಆರೋಪಿಯು ಮಹಿಳೆಗೆ ಬ್ಲಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದು, ಆಕೆ ಪತಿಯ ಮೋಬೈಲ್ ಗೂ ಫೋಟೋಗಳನ್ನು ಕಳುಹಿಸಿದ್ದಾನೆ. ಅಷ್ಟೇ ಅಲ್ಲದೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬಾರದು ಎಂದು ಕೊಲೆ ಬೆದರಿಕೆ ಹಾಕಿದ್ದಾನೆ. 
ಬಳಿಕ ಆರೋಪಿಯ ಕಿರುಕುಳ ತಾಳದೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಯ ವಿರುದ್ಧ ಬಾಗಲಗುಂಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo